ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದ ಕಾರಣ ಕಂಗೆಟ್ಟಿದ್ದ ಹತ್ತಿ ಬೆಳೆದ ರೈತರಿಗೆ ಬಂಪರ್ ಬೆಲೆ ಸಿಕ್ಕಿದೆ. ಗುರುವಾರದಂದು ಹಾವೇರಿ ಎಪಿಎಂಸಿಯಲ್ಲಿ ಕ್ವಿಂಟಾಲ್ ಹತ್ತಿ 10,159 ರೂಪಾಯಿಗಳವರೆಗೆ ಮಾರಾಟವಾಗಿದೆ.
ಗುರುವಾರದಂದು ಹಾವೇರಿ ಎಪಿಎಂಸಿಯಲ್ಲಿ ಒಟ್ಟು 406 ಕ್ವಿಂಟಲ್ ಹತ್ತಿ ಮಾರಾಟವಾಗಿದ್ದು 3,000 ರೂಪಾಯಿಗಳಿಂದ ಗರಿಷ್ಠ 10,159 ರೂಪಾಯಿಗಳವರೆಗೆ ಬೆಲೆ ಸಿಕ್ಕಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇ ಟೆಂಡರ್ ಪ್ರಕ್ರಿಯೆ ನಡೆಯುವ ಕಾರಣ ರೈತರು ಸ್ಪರ್ಧಾತ್ಮಕ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ.