ಶಿವಮೊಗ್ಗ: ಹಣ ಸಂಪಾದನೆಯೇ ಮುಖ್ಯವಲ್ಲ, ಇದರ ಜೊತೆಗೆ ಮಾನವೀಯತೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.
ಅವರು ಇಂದು ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಡಿವಿಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜ್, ಕೌಶಲ್ಯಾಭಿವೃದ್ಧಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದ ಸಾನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳೇ ಮಾದರಿಯಾಗಬೇಕು. ಸ್ವಂತಿಕೆ ಬೆಳೆಸಿಕೊಳ್ಳಬೇಕು. ಉದ್ಯೋಗಕ್ಕೆ ಬೇಕಾದ ಅರ್ಹತೆಗಳನ್ನು ಪಡೆಯಬೇಕು. ಉದ್ಯೋಗ ಪಡೆದ ಮೇಲೆ ಕೇವಲ ಹೊಟ್ಟೆಪಾಡು ಮುಖ್ಯವಲ್ಲ, ಇದರ ಜೊತೆಗೆ ಸಮಾಜ ಮೆಚ್ಚುವ ಕೆಲಸವಾಗಬೇಕು. ನೀವೆಲ್ಲ ಕುರಿಮಂದೆಗಳಾಗದೇ ನಿಮ್ಮತನವನ್ನು ಬೆಳೆಸಿಕೊಳ್ಳಿ ನಿಮಗೇ ನೀವೇ ಗುರು ಎಂದು ಕಿವಿಮಾತು ಹೇಳಿದರು.