ಚಾಣಕ್ಯ ನೀತಿಯು ಅದ್ಭುತ ಜ್ಞಾನ ಭಂಡಾರವಾಗಿದೆ. ಚಾಣಕ್ಯ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ಯಾರು ಕೈ ಹಿಡಿಯುತ್ತಾರೆ, ಯಾರನ್ನು ನಂಬಬೇಕು, ಯಾವ ಗುಣವನ್ನು ಬಿಡಬೇಕು, ಯಾವುದು ಮಾಡಿದ್ರೆ ಒಳ್ಳೆ ಫಲ ಪ್ರಾಪ್ತಿಯಾಗುತ್ತದೆ ಹೀಗೆ ಮನುಷ್ಯನ ಯಶಸ್ವಿ ಜೀವನಕ್ಕೆ ಬೇಕಾದ ಎಲ್ಲ ವಿಷ್ಯವನ್ನು ಚಾಣಕ್ಯ ಹೇಳಿದ್ದಾರೆ. ಮನುಷ್ಯ ಹಣ ಬಂದಾಗ ಏನು ಮಾಡಬಾರದು ಎಂಬುದನ್ನು ಕೂಡ ಚಾಣಕ್ಯ ಹೇಳಿದ್ದಾರೆ.
ಚಾಣಕ್ಯನ ಪ್ರಕಾರ, ಮನುಷ್ಯ ತಪ್ಪುಗಳನ್ನು ಮಾಡುತ್ತಲೇ ಇರ್ತಾನೆ. ಕರ್ಮದ ಆಧಾರದ ಮೇಲೆ ಬಡತನ, ದುಃಖ, ರೋಗವನ್ನು ಅನುಭವಿಸುತ್ತಾನೆ. ಸಂಪತ್ತನ್ನು ಲಕ್ಷ್ಮಿ ಕರುಣಿಸುತ್ತಾಳೆ. ಸಂಪತ್ತನ್ನು ಗೌರವಿಸುವವರನ್ನು ಲಕ್ಷ್ಮಿ ಸದಾ ಕಾಪಾಡುತ್ತಾಳೆ. ಆದ್ರೆ ಯಾರು ಯಾರು ಹಣವಿದ್ದಾಗ ಅದನ್ನು ಗೌರವಿಸುವುದಿಲ್ಲವೋ ಅವರ ಮೇಲೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದ್ರಿಂದ ಬಂದ ಹಣವೆಲ್ಲ ವಾಪಸ್ ಹೋಗುತ್ತದೆ ಎಂದು ಚಾಣಕ್ಯ ಹೇಳ್ತಾರೆ.
ನಾವು ಗಳಿಸಿದ ಹಣದ ಒಂದು ಭಾಗವನ್ನು ದಾನ ಮಾಡಬೇಕು ಎನ್ನುತ್ತಾರೆ ಚಾಣಕ್ಯ. ಒಳ್ಳೆಯ ಕಾರ್ಯಗಳಿಗೆ ಈ ಹಣವನ್ನು ಬಳಸುವುದ್ರಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಶ್ರೀಮಂತರಾಗಿದ್ದಾಗಲೂ ಕಿರಿ ಕಿರಿ ಮಾಡುವವರು, ಹಣವನ್ನು ನೀರಿನಂತೆ ಖರ್ಚು ಮಾಡುವವರ ಬಳಿ ಲಕ್ಷ್ಮಿ ಬರುವುದಿಲ್ಲ ಎನ್ನುತ್ತಾರೆ ಚಾಣಕ್ಯ.
ಇಷ್ಟೇ ಅಲ್ಲ, ಮೋಸಗೊಳಿಸಿ ಹಣ ಸಂಪಾದನೆ ಮಾಡಿದ್ರೆ ಅದರ ಫಲ ನಿಮಗೆ ಪ್ರಾಪ್ತಿಯಾಗುವುದಿಲ್ಲ. ಇದ್ರಿಂದ ವ್ಯಕ್ತಿಗೆ ಬಡತನ ಬರುತ್ತದೆ. ಹಣವಿದ್ದಾಗ, ಆರ್ಥಿಕ ವೃದ್ಧಿಯಾದಾಗ ಅಹಂಕಾರ ತೋರಿಸಬೇಡಿ. ಸದಾ ಹಣವನ್ನು ಪೂಜಿಸಿ ಎನ್ನುತ್ತಾರೆ ಚಾಣಕ್ಯ.