ಕೋವಿಡ್ ಸೋಂಕು ಇಳಿಮುಖವಾಗಿರೋದ್ರಿಂದ ಜನರು ನಿರಾಳವಾಗಿ ರೈಲು ಪ್ರಯಾಣ ಮಾಡಲಾರಂಭಿಸಿದ್ದಾರೆ. ರೈಲು ಪ್ರಯಾಣಿಕರಿಗಾಗಿಯೇ ಪೇಟಿಎಂ ಹೊಸ ಸೇವೆಯೊಂದನ್ನು ಬಿಡುಗಡೆ ಮಾಡಿದೆ. ಪೇಟಿಎಂ ಮೂಲಕ ನೀವು ಹಣ ಪಾವತಿಸದೇ ರೈಲಿನ ಟಿಕೆಟ್ ಗಳನ್ನು ಬುಕ್ ಮಾಡಬಹುದು.
Paytm ಪೋಸ್ಟ್‌ಪೇಯ್ಡ್ ಜೊತೆಗೆ, IRCTC ಟಿಕೆಟ್ ಸೇವೆಯಲ್ಲಿ ‘ಬುಕ್ ನೌ, ಪೇ ಲೇಟರ್’ ಸೇವೆಯನ್ನು ಸಹ ಪ್ರಾರಂಭಿಸಲಾಗಿದೆ, ಅದರ ಅಡಿಯಲ್ಲಿ ನೀವು ತಕ್ಷಣ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ನಂತರ ಹಣ ಪಾವತಿಸಬಹುದು. Paytm ಪೋಸ್ಟ್‌ಪೇಯ್ಡ್ ತನ್ನ ಗ್ರಾಹಕರಿಗೆ 30 ದಿನಗಳವರೆಗೆ 60,000 ರೂಪಾಯಿವರೆಗೂ ಕ್ರೆಡಿಟ್ ನೀಡುತ್ತದೆ. ಇದಕ್ಕಾಗಿ ನೀವು ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ.
ಈ ಕ್ರೆಡಿಟ್‌ನಿಂದ ಉಂಟಾದ ಎಲ್ಲಾ ವೆಚ್ಚಗಳನ್ನು ತಿಂಗಳ ಕೊನೆಯಲ್ಲಿ ನಿಮಗೆ ಬಿಲ್ ಮಾಡಲಾಗುತ್ತದೆ. ನೀವು ಈ ಬಿಲ್ ಅನ್ನು EMI ಆಗಿಯೂ ಪಾವತಿಸಬಹುದು. ‘ಬುಕ್ ನೌ, ಪೇ ಲೇಟರ್’ ಆಯ್ಕೆಯೊಂದಿಗೆ IRCTC ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವುದರ ಜೊತೆಗೆ ಇತರ ಹಲವು ಸೇವೆಗಳನ್ನೂ ಬಳಸಿಕೊಳ್ಳಬಹುದು.
Paytmನ ಈ ಕ್ರೆಡಿಟ್ ಸೇವೆಯ ಮೂಲಕ ನೀವು ಶಾಪಿಂಗ್ ಮಾಡಬಹುದು. ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಪಾವತಿಸಬಹುದು. ನೀವು ಚಿಲ್ಲರೆ ಅಂಗಡಿಗಳಲ್ಲಿ ವಹಿವಾಟು ಮಾಡಬಹುದು. ಆನ್ ಲೈನ್ ನಲ್ಲೂ ವ್ಯವಹರಿಸಬಹುದು.