alex Certify ಹಣ್ಣು, ತರಕಾರಿಗಳ ಸಿಪ್ಪೆ ಬಳಸಿ ರಕ್ಷಿಸಿಕೊಳ್ಳಿ ಸೌಂದರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣು, ತರಕಾರಿಗಳ ಸಿಪ್ಪೆ ಬಳಸಿ ರಕ್ಷಿಸಿಕೊಳ್ಳಿ ಸೌಂದರ್ಯ

ಅಡುಗೆ ಮನೆಯಲ್ಲಿ ಬಳಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ. ಯಾಕೆಂದರೆ ಆ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ವಿಟಮಿನ್, ಖನಿಜ ಇತ್ಯಾದಿಗಳ ಆಗರವಾಗಿರುವ ಇದರಿಂದ ಚರ್ಮದ ಆರೋಗ್ಯ ಹೆಚ್ಚಿಸಲು ಸಾಧ್ಯವಿದೆ. ಅದು ಹೇಗೆ ಅಂತ ತಿಳಿದುಕೊಳ್ಳೋಣ.

* ಸುವರ್ಣಗಡ್ಡೆಯ ಸಿಪ್ಪೆಯನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿದರೆ ಚರ್ಮದ ಬಣ್ಣ ತಿಳಿಯಾಗುತ್ತದೆ.

* ವಿಟಮಿನ್ ಸಿ ಯ ಆಗರವಾಗಿರುವ ಕಿತ್ತಳೆ ಹಣ್ಣಿನ ಸಿಪ್ಪೆಯ ಪೇಸ್ಟ್ ಗೆ ಮೊಸರು, ಜೇನುತುಪ್ಪ ಹಾಕಿ ಕಲಸಿ ಮುಖಕ್ಕೆ ಹಚ್ಚಿದರೆ ಚರ್ಮ ಸ್ವಚ್ಛವಾಗಿ ಕಾಂತಿಯುಕ್ತವಾಗುತ್ತದೆ.

* ಆಂಟಿ ಆಕ್ಸಿಡೆಂಟ್ ನ ಆಗರವಾಗಿರುವ ಟೊಮ್ಯಾಟೊ ಹಣ್ಣಿನ ಸಿಪ್ಪೆಯ ಪೇಸ್ಟನ್ನು ಮುಖಕ್ಕೆ ಲೇಪಿಸಿದರೆ ಒಂದೇ ವಾರದಲ್ಲಿ ಚರ್ಮಕ್ಕೆ ಹೊಸ ಹೊಳಪು ಸಿಗುತ್ತದೆ.

* ವಿಟಮಿನ್ ಬಿ6 ನ ಆಗರವಾಗಿರುವ ಮೂಲಂಗಿ ಸಿಪ್ಪೆಯ ಪೇಸ್ಟ್ ಗೆ ಸ್ವಲ್ಪ ಜೇನುತುಪ್ಪ ಹಾಕಿ ಮುಖಕ್ಕೆ ಹಚ್ಚಿದರೆ ಚರ್ಮದ ಬಣ್ಣ ತಿಳಿಯಾಗುತ್ತದೆ.

* ಆಲೂಗಡ್ಡೆ ಸಿಪ್ಪೆಯ ಪೇಸ್ಟನ್ನು ಮುಖಕ್ಕೆ ಹಚ್ಚಿ ತೊಳೆದರೆ ಒಣ ಚರ್ಮದ ಸಮಸ್ಯೆ ದೂರವಾಗಿ ಚರ್ಮಕ್ಕೆ ಹೊಸ ಕಾಂತಿ ಸಿಗುತ್ತದೆ.

* ಪಪ್ಪಾಯ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜಿದರೆ ಚರ್ಮದ ಕೊಳೆಗಳೆಲ್ಲಾ ಹೋಗಿ ತ್ವಚೆ ಮೃದುವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...