ಮನೆಗೆ ಒಂದಷ್ಟು ಹಣ್ಣು ತಂದಿರುತ್ತೇವೆ. ಅಥವಾ ಹಬ್ಬ ಹರಿದಿನಗಳಲ್ಲಿ ತಂದ ಹಣ್ಣು ಸಾಕಷ್ಟು ಮಿಕ್ಕಿರುತ್ತದೆ. ಇದನ್ನು ತುಂಬಾ ದಿನ ಇಡುವುದಕ್ಕೆ ಆಗುವುದಿಲ್ಲ. ಬೇಗನೆ ಹಾಳಾಗುತ್ತದೆ. ಈ ಹಣ್ಣುಗಳು ಕೆಡದಂತೆ ಕಾಪಾಡಲು ಇಲ್ಲಿ ಟಿಪ್ಸ್ ಇದೆ ಟ್ರೈ ಮಾಡಿ.
ಸೇಬು ಹಣ್ಣನ್ನು ಹಾಗೆಯೇ 4-5 ದಿನ ಇಟ್ಟರೆ ಒಳಗಡೆಯಿಂದ ಹಾಳಾದ ರೀತಿ ಇರುತ್ತದೆ. ಇದನ್ನು ತಡೆಯಲು ಸೇಬು ಹಣ್ಣಿಗೆ ನ್ಯೂಸ್ ಪೇಪರ್ ಸುತ್ತಿ ಇಡಿ. ಇನ್ನು ಫ್ರಿಡ್ಜ್ ನಲ್ಲಿಡುವುದಾದರೆ ಸೇಬುಹಣ್ಣುಗಳನ್ನು ನ್ಯೂಸ್ ಪೇಪರ್ ನಿಂದ ಕವರ್ ಮಾಡಿ ಇದನ್ನು ಒಂದು ಪ್ಲಾಸ್ಟಿಕ್ ಕವರ್ ಗೆ ಹಾಕಿ ಫ್ರಿಡ್ಜ್ ನಲ್ಲಿಟ್ಟರೆ ಹಾಳಾಗುವುದಿಲ್ಲ. ಹೊರಗಡೆ ಇಡುವುದಾದರೆ ಒಂದು ಟ್ರೇ ಮೇಲೆ ನ್ಯೂಸ್ ಪೇಪರ್ ಹಾಕಿ ಅದರ ಮೇಲೆ ಸೇಬು ಹಣ್ಣುಗಳನ್ನು ಇಟ್ಟು ಬಿಡಿ. ಆಗ ಜಾಸ್ತಿ ದಿನ ಇಡಬಹುದು,
ಇನ್ನು ಬೆರಿ (ಸ್ಟ್ರಾಬೆರಿ, ಬ್ಲೂಬೆರಿ) ಯಂತಹ ಹಣ್ಣುಗಳನ್ನು ಮೊದಲು ಚೆನ್ನಾಗಿ ತೊಳೆದು ನೀರನ್ನು ಸೋಸಿಕೊಂಡು ಒಂದು ಟ್ರೇ ಮೇಲೆ ಇದನ್ನು ನಿಧಾನಕ್ಕ ಇಟ್ಟು ಫ್ರಿಜರ್ ನಲ್ಲಿಡಿ. ನಂತರ ಒಂದು ಕವರ್ ಗೆ ಹಾಕಿ ಫ್ರಿಡ್ಜ್ ನಲ್ಲಿಟ್ಟರೆ ಸ್ವಲ್ಪ ದಿನಗಳ ಕಾಲ ಕೆಡದಂತೆ ಇರುತ್ತದೆ.