ಹಣೆಯಲ್ಲಿ ಬರೆದಿದ್ದು ಆಗುತ್ತೆ ಎನ್ನುವವರಿದ್ದಾರೆ. ನಮ್ಮ ಭವಿಷ್ಯ ಹಣೆಯಲ್ಲಿ ಬರೆದಿರುತ್ತೆ ಎಂದು ಅನೇಕರು ನಂಬುತ್ತಾರೆ. ಹಣೆಯಲ್ಲಿ ಮೂಡುವ ಗೆರೆಯಲ್ಲಿ ಎಲ್ಲ ಅಡಗಿದೆ. ಹಣೆಯ ಯಾವ ಯಾವ ಗೆರೆಗಳು ಏನೇನು ಹೇಳುತ್ವೆ ಎಂಬುದು ಗೊತ್ತಾ?
ಹಣೆಯ ಮೊದಲ ಸಾಲು, ಹುಬ್ಬಿನ ಹತ್ತಿರವಿರುವ ರೇಖೆ ಧನ ರೇಖೆ. ಈ ರೇಖೆ ಎಷ್ಟು ಸ್ಪಷ್ಟವಾಗಿರುತ್ತದೆಯೋ ಅಷ್ಟು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಎಂದರ್ಥ. ಈ ರೇಖೆ ಸಾಲುಗಳು ಚಿಕ್ಕದಾಗಿದ್ದರೆ ಅಥವಾ ಅರ್ಥಕ್ಕೆ ಕತ್ತರಿಸಲ್ಪಟ್ಟಿದ್ದರೆ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲವೆಂದರ್ಥ.
ಹುಬ್ಬಿನ ಮೇಲೆ ಇರುವ ಎರಡನೇ ರೇಖೆ ಆರೋಗ್ಯ ರೇಖೆ. ಈ ರೇಖೆ ದಪ್ಪ ಹಾಗೂ ಸ್ಪಷ್ಟವಾಗಿದ್ದರೆ ಆ ವ್ಯಕ್ತಿ ಆರೋಗ್ಯವಾಗಿರುತ್ತಾನೆಂದರ್ಥ. ಸಣ್ಣದಾಗಿದ್ದರೆ ಹಾಗೂ ತೆಳ್ಳಗಿದ್ದರೆ ಅನಾರೋಗ್ಯಕ್ಕೊಳಗಾಗ್ತಾರೆ ಎಂಬ ಸಂಕೇತ.
ಕೆಳಗಿನಿಂದ ಮೂರನೇ ರೇಖೆ ಅದೃಷ್ಟದ ಸಂಕೇತ. ಇದು ಎಲ್ಲರ ಹಣೆಯಲ್ಲಿ ಕಾಣುವುದಿಲ್ಲ. ಈ ರೇಖೆಯಿದ್ರೆ ಆ ವ್ಯಕ್ತಿ ಅದೃಷ್ಟಶಾಲಿ ಎಂದರ್ಥ.
ನಾಲ್ಕನೇ ರೇಖೆ ಇರುವುದು ಅಪರೂಪಗಳಲ್ಲಿ ಅಪರೂಪ. ಇದು ಕಂಡು ಬಂದಲ್ಲಿ ಜೀವನದಲ್ಲಿ ಸಾಕಷ್ಟು ಏರಿತಗಳಿರುತ್ತವೆ ಎಂದರ್ಥ. 20ರಿಂದ 40 ವರ್ಷ ವಯಸ್ಸಿನಲ್ಲಿ ಏರಿಳಿತ ಹೆಚ್ಚಾಗುತ್ತದೆ ಎಂಬುದರ ಸೂಚನೆ. 40 ವರ್ಷದ ನಂತ್ರ ಅವ್ರು ಯಶಸ್ಸು ಗಳಿಸ್ತಾರೆ. ಒಂದಕ್ಕಿಂತ ಹೆಚ್ಚು ಆಸ್ತಿ ಮಾಡ್ತಾರೆ.
ಐದನೇ ರೇಖೆ ಚಿಂತೆಯ ಸಂಕೇತ. ಈ ರೇಖೆಯಿರುವ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಚಿಂತೆ ಕಾಡುತ್ತದೆ.
ಮೂಗಿನಿಂದ ಮೇಲೆ ಇರುವ ಆರನೇ ರೇಖೆ ದೈವಿ ರೇಖೆ. ದೈವಿಕ ಅನುಗ್ರಹವನ್ನು ವ್ಯಕ್ತಿ ಹೊಂದಿರುತ್ತಾನೆ ಎಂದರ್ಥ.