ಹಣೆಗೆ ತಿಲಕವಿಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡುಬಂದಿದೆ. ಇದನ್ನು ಕೆಲವರು ವಿಜಯದ ಸಂಕೇತವಾಗಿ ಕೂಡ ಬಳಸುವುದುಂಟು. ಹೀಗೆ ಹಣೆಗೆ ಇಡುವ ತಿಲಕದಿಂದ ನಮ್ಮ ಆರೋಗ್ಯಕ್ಕೂ ಒಳಿತಾಗುತ್ತದೆ. ಸಾಮಾನ್ಯವಾಗಿ ನಾವು ಹಣೆಯ ಯಾವ ಭಾಗದಲ್ಲಿ ತಿಲಕವಿಡುತ್ತೇವೆಯೋ ಅಲ್ಲಿ ಆಜ್ಞಾಚಕ್ರ ಅಥವಾ ಗುರುಚಕ್ರ ಇರುತ್ತದೆ. ಇಂತಹ ಭಾಗದಲ್ಲಿ ತಿಲಕ ಇಡುವುದರಿಂದ ಶಕ್ತಿ ಕೇಂದ್ರಗಳು ಸುಸ್ಥಿತವಾಗಿರುತ್ತವೆ.
ಹಣೆಯ ಮೇಲಿನ ತಿಲಕವನ್ನು ಸಾಮಾನ್ಯವಾಗಿ ಹಳದಿ, ಕುಂಕುಮದಿಂದ ಇಡುತ್ತಾರೆ. ಇದರಿಂದ ಕಾರ್ಯಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲವೊಬ್ಬರು ಅದರ ಜೊತೆಗೆ ಅಕ್ಷತೆ (ಅಕ್ಕಿ)ಯ ಕಾಳನ್ನು ಇಡುತ್ತಾರೆ. ಈ ರೀತಿ ಅಕ್ಕಿಯನ್ನು ಹಣೆಗೆ ಇಡುವುದರಿಂದ ದೇವಿ ಲಕ್ಷ್ಮಿ ಅವರಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ.
ಪ್ರತಿನಿತ್ಯ ಹಳದಿಯ ತಿಲಕವಿಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಆಯುಷ್ಯ ವೃದ್ಧಿಗಾಗಿ ಹೆಬ್ಬೆಟ್ಟಿನಿಂದ, ಶತ್ರುಗಳನ್ನು ನಾಶಪಡಿಸುವುದಕ್ಕಾಗಿ ತೋರುಬೆರಳಿನಿಂದ, ಹಣವಂತನಾಗಲು ಮಧ್ಯದ ಬೆರಳಿನಿಂದ ಮತ್ತು ಸುಖ ಶಾಂತಿಗಾಗಿ ಅನಾಮಿಕ ಬೆರಳಿನಿಂದ ತಿಲಕವಿಡುತ್ತಾರೆ.