ಹಣವನ್ನು ಧನಲಕ್ಷ್ಮಿದೇವಿಯ ಸ್ವರೂಪ ಎಂದು ಭಾವಿಸುತ್ತಾರೆ. ಹಾಗಾಗಿ ಈ ಹಣವನ್ನು ಎಲ್ಲೆಂದರಲ್ಲಿ ಇಡಬಾರದು. ಇದರಿಂದ ಲಕ್ಷ್ಮಿದೇವಿಗೆ ಅವಮಾನ ಮಾಡಿದಂತಾಗುತ್ತದೆ. ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾರೆ. ಆಗ ನಮಗೆ ಹಣಕಾಸಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಣವನ್ನು ನಿಯಮನುಸಾರವಾಗಿ ಇಡಿ.
ಹಣವನ್ನು ಮಲಗುವ ಹಾಸಿಗೆಯ ಮೇಲೆ ಇಟ್ಟು ಲೆಕ್ಕಹಾಕಬಾರದು. ಹಾಗೇ ನೆಲದ ಮೇಲೆ ಇಟ್ಟು ಲೆಕ್ಕ ಹಾಕಬಾರದು. ಬದಲಾಗಿ ಚಾಪೆಯ ಮೇಲೆ ಇಟ್ಟು ಹಣವನ್ನು ಲೆಕ್ಕ ಹಾಕಬೇಕು ಅಥವಾ ಒಂದು ಶುಭ್ರವಾದ ಬಟ್ಟೆಯ ಮೇಲಿಡಿ. ಇದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುೆತ್ತಾಳೆ.
ಅಲ್ಲದೇ ಬೀರುವಿನಲ್ಲಿ ಹಣದ ಜೊತೆ ಕೋರ್ಟ್ ಗೆ ಸಂಬಂಧಿಸಿದ ಪತ್ರ, ಸಾಲದ ಪತ್ರಗಳನ್ನು ಇಡಬಾರದು. ಇದರಿಂದ ಲಕ್ಷ್ಮಿದೇವಿಯ ಅನುಗ್ರಹ ಸಿಗುವುದಿಲ್ಲ. ಹಾಗೇ ಅಗ್ನಿಗೆ ಸಂಬಂಧಪಟ್ಟ ವಸ್ತುಗಳ ಬಳಿ ಹಣವನ್ನು ಇಡಬೇಡಿ. ಬಟ್ಟೆಗಳ ನಡುವೆ ಹಣವನ್ನು ಇಡಬಾರದು. ಇದರಿಂದ ಹಣ ಖರ್ಚಾಗಿ ಹೋಗುತ್ತದೆ. ಹಣವನ್ನು ಒಂದು ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಇಡಿ.