
ಜೀವಿಸಲು ನೀರು, ಗಾಳಿ, ಆಹಾರ ಎಷ್ಟು ಮುಖ್ಯನೋ ಹಾಗೇ ಜೀವನ ನಡೆಸಲು ಹಣ ಕೂಡ ಅಷ್ಟೇ ಮುಖ್ಯ. ಹಣ ಮನುಷ್ಯನ ಅತಿ ಅವಶ್ಯಕ. ಎಷ್ಟೇ ಕಷ್ಟಪಟ್ಟು ದುಡಿದರೂ ಅದನ್ನು ಉಳಿತಾಯ ಮಾಡಲು ಆಗುವುದಿಲ್ಲ. ಅಂತವರು ಸೋಮವಾರದಂದು ಈ ಪರಿಹಾರವನ್ನು ಮಾಡಿ.
ದೈವತ್ವವಿರುವ ಸುಗಂಧಭರಿತ ವಸ್ತು. ಸೋಮವಾರದಂದು ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡುವಾಗ ನೀರಿಗೆ ಶ್ರೀಗಂಧ ಹಾಕಿ ಸ್ನಾನ ಮಾಡಿ. ಬಳಿಕ ಪೂಜೆ ಮಾಡುವಾಗ ಲಕ್ಷ್ಮೀನಾರಾಯಣ, ಶಿವನ ಪೋಟೊಗೆ ಹೂ, ಶ್ರೀಗಂಧದ ತಿಲಕವನ್ನಿಟ್ಟು ಪೂಜೆ ಮಾಡಿ ಬೆಲ್ಲ ಮತ್ತು ಕಡಲೆಕಾಳನ್ನು ನೈವೇದ್ಯವಾಗಿ ಇಡಬೇಕು. ಇದರಿಂದ ನಿಮ್ಮ ಮೇಲೆ ದೇವರ ಅನುಗ್ರಹ ದೊರೆತು ಅಂದುಕೊಂಡ ಕಾರ್ಯಗಳು ಕೈಗೂಡುತ್ತದೆ.