ಹೆಂಡತಿಗೆ ಹೇಳದೆ ರಹಸ್ಯವಾಗಿ ವೀರ್ಯಾಣು ದಾನ ಮಾಡುವ ವಿಕ್ಕಿ ಡೋನರ್ ಸಿನೆಮಾ ನೆನಪಿದೆಯಾ ? ಇಂಥದ್ದೇ ನೈಜ ಘಟನೆಯೊಂದು ನಡೆದಿದೆ. ಪತ್ನಿಗೆ ತಿಳಿಸದೇ ವೀರ್ಯಾಣು ದಾನ ಮಾಡಿದ ವ್ಯಕ್ತಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾನೆ.
ಈ ಬಗ್ಗೆ ಖುದ್ದು ಆ ವ್ಯಕ್ತಿಯೇ ರೆಡಿಟ್ ನಲ್ಲಿ ಬರೆದುಕೊಂಡಿದ್ದಾನೆ. ಹೆಚ್ಚುವರಿ ಹಣ ಗಳಿಸಲು ಆತ ಈ ಮಾರ್ಗವನ್ನು ಆಯ್ದುಕೊಂಡಿದ್ದ. ಪತಿ ವೀರ್ಯ ದಾನ ಮಾಡ್ತಿರೋ ವಿಷಯ ತಿಳಿದ ಪತ್ನಿ ಆಘಾತಗೊಂಡಿದ್ದಳು. ಆತ ತನಗೆ ಮೋಸ ಮಾಡಿದ್ದಾನೆಂಬ ಭಾವನೆ ಅವಳಲ್ಲಿ ಬೇರೂರಿತ್ತು. ತನ್ನ ಪತಿ ಅಪರಿಚಿತ ಜೈವಿಕ ಮಕ್ಕಳನ್ನು ಹೊಂದಿರಬಹುದು ಎಂಬ ಆಲೋಚನೆಯಿಂದ ಆಕೆ ದುಃಖಿತಳಾಗಿದ್ದಾಳೆ.
ಇದೇ ವಿಚಾರಕ್ಕೆ ಪತಿ-ಪತ್ನಿ ಮಧ್ಯೆ ಜಗಳವಾಗಿದೆ. ಕಾಲೇಜಿನಲ್ಲಿದ್ದಾಗ್ಲೇ ಆತ ಹಣ ಗಳಿಸಲು ವೀರ್ಯ ನೀಡುತ್ತಿದ್ದ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಸಿಗಲಿ ಎಂಬ ಭಾವನೆಯೂ ಅವನಲ್ಲಿತ್ತು. ನಂತರ ವೀರ್ಯಾಣು ದಾನ ಮಾಡುವುದನ್ನು ನಿಲ್ಲಿಸಿದ್ದ. 6 ವರ್ಷಗಳ ಹಿಂದೆ ಆತನಿಗೆ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ. ಇತ್ತೀಚೆಗೆ ಆರ್ಥಿಕ ತೊಂದರೆಯಿಂದಾಗಿ ಮನೆ ನಡೆಸುವುದು ಕಷ್ಟವಾಗುತ್ತಿತ್ತು.
ಹಾಗಾಗಿ ಮತ್ತೆ ವೀರ್ಯಾಣು ದಾನ ಮಾಡಿ ಹಣ ಗಳಿಸಲು ಶುರು ಮಾಡಿದ್ದ. ಇದೊಂದು ದೊಡ್ಡ ವಿಚಾರವೇನಲ್ಲ ಅಂತಾ ಆತ ಪತ್ನಿಗೆ ಹೇಳಿರಲಿಲ್ಲವಂತೆ. ವೀರ್ಯಾಣು ದಾನ ಮಾಡಿ ಹಣ ಗಳಿಸಿದ ಆತ ಸ್ವಂತಕ್ಕೆ ಮನೆಯನ್ನೂ ಖರೀದಿಸಿದ್ದ, ಪತಿ ಮತ್ತು ಮಕ್ಕಳನ್ನು ಸುಖವಾಗಿಟ್ಟಿದ್ದ. ಆದ್ರೀಗ ಪತಿ ವೀರ್ಯದಾನ ಮಾಡಿದ ವಿಷಯ ತಿಳಿದು ಪತ್ನಿ ಆಘಾತಕ್ಕೊಳಗಾಗಿದ್ದಾಳೆ. ತನ್ನ ಅಳಲನ್ನು ಪತಿ ಜಾಲತಾಣದಲ್ಲಿ ತೋಡಿಕೊಂಡಿದ್ದಾನೆ.