alex Certify ಹಠಾತ್‌ ಲೂಸ್‌ ಮೋಶನ್‌ ಉಂಟಾದರೆ ಗಾಬರಿ ಬೇಡ; ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಠಾತ್‌ ಲೂಸ್‌ ಮೋಶನ್‌ ಉಂಟಾದರೆ ಗಾಬರಿ ಬೇಡ; ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ

ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹಠಾತ್ ಅತಿಸಾರವೂ ಅವುಗಳಲ್ಲೊಂದು. ಇದ್ದಕ್ಕಿದ್ದಂತೆ ಲೂಸ್‌ ಮೋಶನ್‌ ಆರಂಭವಾಗುತ್ತದೆ, ಮಲವು ಸಾಮಾನ್ಯಕ್ಕಿಂತ ತೆಳ್ಳಗಾಗುತ್ತದೆ. ಇದಲ್ಲದೆ ಹೊಟ್ಟೆಯಲ್ಲಿ ನೋವು ಮತ್ತು ದೇಹದಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭಯಪಡಬಾರದು, ಏಕೆಂದರೆ ಅನೇಕ ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ತೊಡೆದುಹಾಕಬಹುದು.

ಅತಿಸಾರದ ಸಂದರ್ಭದಲ್ಲಿ ಏನು ಮಾಡಬೇಕು ?

ಔಷಧಿಗಳನ್ನು ತೆಗೆದುಕೊಳ್ಳದೆಯೇ ಲೂಸ್ ಮೋಷನ್ ಸಮಸ್ಯೆಯನ್ನು ಹೋಗಲಾಡಿಸಲು ನೀವು ಬಯಸಿದರೆ, ಅಜ್ಜಿಯ ಕಾಲದ ಅನೇಕ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳಿಂದ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.  ಅತಿಸಾರ ಉಂಟಾದಾಗ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ. ಹಾಗಾಗಿ ದೇಹವನ್ನು ಹೈಡ್ರೇಟ್ ಆಗಿ ಇಡುವುದು ಅನಿವಾರ್ಯ. ಇದಕ್ಕಾಗಿ ಒಂದು ಲೀಟರ್ ನೀರಿನಲ್ಲಿ 5 ಚಮಚ ಸಕ್ಕರೆ ಮತ್ತು ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಿ. ದಿನವಿಡೀ ಸ್ವಲ್ಪ ಸ್ವಲ್ಪ ಈ  ದ್ರಾವಣವನ್ನು ಕುಡಿಯಿರಿ.

ಓಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾದ ಮಸಾಲೆ ಪದಾರ್ಥ. ಸ್ವಲ್ಪ ಓಮವನ್ನು ತೆಗೆದುಕೊಂಡು ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಅದನ್ನು ಸೇವಿಸಿ. ಹೀಗೆ ಮಾಡುವುದರಿಂದ ಲೂಸ್‌ ಮೋಶನ್‌ ಕಡಿಮೆಯಾಗುತ್ತದೆ. ಅತಿಸಾರದ ಸಮಯದಲ್ಲಿ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವ ಯಾವುದೇ ಪದಾರ್ಥಗಳನ್ನು ತಿನ್ನಬೇಡಿ. ಹೆಚ್ಚು ಹೆಚ್ಚು ಲಘುವಾದ ದ್ರವಗಳನ್ನು ತೆಗೆದುಕೊಳ್ಳಿ.  ಹಣ್ಣಿನ ರಸ ಮತ್ತು ಎಳನೀರನ್ನು ಕುಡಿಯಬಹುದು.

ಉಪ್ಪು ಮತ್ತು ನಿಂಬೆರಸ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳು ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬೇಸಿಗೆಯಲ್ಲಿ ಮೊಸರು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಈ ಪ್ರಿಬಯೋಟಿಕ್ ಆಹಾರವು ಹೊಟ್ಟೆಗೆ ತಂಪು ನೀಡುತ್ತದೆ, ಇದರಿಂದಾಗಿ ಅತಿಸಾರದ ಸಮಸ್ಯೆ ದೂರವಾಗುತ್ತದೆ. ಲೂಸ್‌ ಮೋಶನ್‌ ಇದ್ದಾಗ ಮೊಸರನ್ನ ತಿನ್ನುವುದು ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...