alex Certify ಹಗಲು – ರಾತ್ರಿ ಅನ್ನದೇ 12 ದಿನಗಳ ಕಾಲ ವೃತ್ತಾಕಾರದಲ್ಲಿ ಸುತ್ತು ಹಾಕಿದ ಕುರಿಗಳು…! ವಿಶ್ವಕ್ಕೆ ಕಂಟಕ ಕಾದಿದೆಯಾ ಎಂದು ಆತಂಕ ಹೊರ ಹಾಕಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಗಲು – ರಾತ್ರಿ ಅನ್ನದೇ 12 ದಿನಗಳ ಕಾಲ ವೃತ್ತಾಕಾರದಲ್ಲಿ ಸುತ್ತು ಹಾಕಿದ ಕುರಿಗಳು…! ವಿಶ್ವಕ್ಕೆ ಕಂಟಕ ಕಾದಿದೆಯಾ ಎಂದು ಆತಂಕ ಹೊರ ಹಾಕಿದ ನೆಟ್ಟಿಗರು

Sheep filmed walking in circle for 12 days straight in Chinaಚೀನಾದ ಮಂಗೋಲಿಯಾದ ಈ ಒಂದು ವಿಡಿಯೋ ನೋಡಿ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಒಂದಲ್ಲ ಎರಡಲ್ಲ ಸುಮಾರು 12 ದಿನಗಳಿಂದ ಕುರಿಗಳ ಹಿಂಡು, ಒಂದೇ ಜಾಗದಲ್ಲಿ ವೃತ್ತಾಕಾರದಲ್ಲಿ ಸುತ್ತಾಡಿದ ದೃಶ್ಯ ಇದು. ಕುರಿಗಳು ಹೀಗೆ ಸುತ್ತಾಡಿರೋ ಪರಿ ನೋಡಿ ಎಷ್ಟೋ ಜನ ಇದು ಮಂದಾಗಲಿರೋ ಕಂಟಕದ ಸೂಚನೆ ಅಂತಾನೂ ಅಂದುಕೊಂಡರು.

ಒಂದು ಮಾಹಿತಿ ಪ್ರಕಾರ ಕುರಿಸಾಗಾಣೆಯ ಈ ಕೇಂದ್ರದಲ್ಲಿ ಎಲ್ಲ ಕುರಿಗಳು ಹೀಗೆ ವರ್ತಿಸಿರಲಿಲ್ಲ, ಬದಲಾಗಿ 34 ಕುರಿಗಳ ಗುಂಪು ಮಾತ್ರ ಹೀಗೆ ಹಗಲು ರಾತ್ರಿ ಅನ್ನದೇ 12 ದಿನ ಸುತ್ತು ಹಾಕಿದ್ದವು. ಇದೇ ವಿಡಿಯೋವನ್ನು ಪೀಪಲ್ಸ್ ಡೈಲಿ, ಚೀನಾ ಅನ್ನೊ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕುರಿ ಸಾಗಾಣೆ ಮಾಲೀಕ ಎಂ.ಎಸ್ ಮಿಯಾವೋ ಹೇಳುವ ಪ್ರಕಾರ, ಕುರಿಗಳು ಯಾಕೆ ಹೀಗೆ ವರ್ತಿಸಿದವು ಅನ್ನೋದು ತಮಗೂ ಗೊತ್ತಿಲ್ಲ. ಆದರೆ ಈಗ ಎಲ್ಲ ಕುರಿಗಳು ಆರೋಗ್ಯವಾಗಿವೆ. ಇದು ಬಹುಶಃ ಲಿಸ್ಟೀರಿಯೊಸಿಸ್ ಅಥವಾ “ಸರ್ಕ್ಲಿಂಗ್ ಡಿಸೀಸ್“ ಎಂಬ ಬ್ಯಾಕ್ಟಿರಿಯಾ ಪ್ರಭಾವ ಇರಬಹುದು ಅಂತ ಮಾಹಿತಿ ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.

ಈಗ ಸೋಶಿಯಲ್ ಮೀಡಿಯಾದಲ್ಲಿ, ಇದೇ ಭಾರೀ ಸುದ್ದಿ ಮಾಡಿದ್ದು, ನೆಟ್ಟಿಗರು ತರ್ಕಕ್ಕೆ ನಿಲುಕದಂತ ವಿಚಾರಗಳನ್ನ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಭಯ ಮಿಶ್ರಿತ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಯಾರಾದರೂ ಹೇಳಿ ಈ ಕುರಿಗಳು ಯಾಕೆ ಹೀಗೆ 12ದಿನಗಳಿಂದ ಸುತ್ತು ಹಾಕ್ತಿವೆ, ಅಂತ ಆತಂಕ ತುಂಬಿದ ಕಾಮೆಂಟ್ ಹಾಕಿದ್ದಾರೆ.

ಇನ್ನೊಬ್ಬರು “ ದೇವರೇ ಇದು ನಿಜಕ್ಕೂ ವಿಚಿತ್ರವಾಗಿದೆ. ಕುರಿಗಳು ಚಕ್ರವ್ಯೂಹವೇ ಇಲ್ಲಿ ಸೃಷ್ಟಿಯಾದಂತಿದೆ. ಇದು ಏನಾದರೂ ಅನಾಹುತದ ಸೂಚನೆಯಾ ಅಂತ ಮೆಸೆಜ್ ಹಾಕಿದ್ದಾರೆ. ಒಬ್ಬರು ಇದನ್ನು ತಮಾಷೆ ಮಾಡಿದ್ದಾರೆ “ಹೀಗೆ ಸುತ್ತು ಹಾಕಿ ಕೊನೆಯಲ್ಲಿ ಉಳಿಯುವ ಕುರಿಗೆ ನಾನು ಒಂದು ಕೋಟಿ ರೂಪಾಯಿ ಕೊಡ್ತೇನೆ ಅಂದಿದ್ದೆ. ಅದಕ್ಕೆ ಅವು ಹೀಗೆ ಸುತ್ತು ಹಾಕ್ತಿವೆ. ಎಂದು ಮೆಸೇಜ್ ಹಾಕಿದ್ದಾರೆ.

ಹೀಗೆ ಕುರಿಗಳು ವೃತ್ತಾಕಾರದಲ್ಲಿ ಸುತ್ತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ಏನೇ ಇರಬಹುದು. ಆದರೆ ಈ ವಿಡಿಯೋ ನೋಡಿ ಅದೆಷ್ಟೋ ಜನ ಶಾಕ್ ಆಗಿದ್ದಂತೂ ಸುಳ್ಳಲ್ಲ.

— People's Daily, China (@PDChina) November 16, 2022

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Pre zaujímavé tipy a triky, recepty na varenie a užitočné články o záhrade, navštívte našu stránku ešte dnes! Čakajú na vás informácie, ktoré vám pomôžu zlepšiť váš každodenný život a záhradkárske skúsenosti. Ako variť ryby v rúre: 7 Chladivá uhorková Jahňací šalát s Chutney zo sušených marhúľ: Jedinečná chuťová Horoskop Jednoduchá a Chlieb so španielskym paradajkovým posúchom Ako soliť