ಭಾರತದಲ್ಲಿರುವ ಸ್ವಿಜರ್ಲ್ಯಾಂಡ್ ಮೂಲದ ಬ್ಯಾಂಕುಗಳು ಮತ್ತು ಸ್ವಿಜರ್ಲ್ಯಾಂಡ್ ನಲ್ಲಿರುವ ಬ್ಯಾಂಕುಗಳಲ್ಲಿ ಭಾರತೀಯರು ಬರೋಬ್ಬರಿ 30,500 ಕೋಟಿ ರೂಪಾಯಿಗಳನ್ನು ಇಟ್ಟಿದ್ದಾರೆ. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಎಂದು ಹೇಳಲಾಗಿದೆ.
2020ರ ಅಂತ್ಯದಲ್ಲಿ ಭಾರತೀಯ ಗ್ರಾಹಕರು ಸ್ವಿಸ್ ಬ್ಯಾಂಕ್ ಗಳಲ್ಲಿ ಸುಮಾರು 20,700 ಕೋಟಿ ರೂಪಾಯಿಗಳನ್ನು ಇರಿಸಿದ್ದು, ಆದರೆ ಕಳೆದ ಎರಡು ವರ್ಷಗಳಿಂದ ಈ ಮೊತ್ತ ಏರಿಕೆಯಾಗುತ್ತಿದೆ ಎನ್ನಲಾಗಿದೆ.
ಇನ್ನು ಭಾರತೀಯರ ಉಳಿತಾಯ ಖಾತೆಯ ಠೇವಣಿ 4,800 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎನ್ನಲಾಗಿದ್ದು ಇದು ಕಳೆದ ಏಳು ವರ್ಷಗಳ ಗರಿಷ್ಠ ಮೊತ್ತವಾಗಿದೆ. ಆದರೆ ಸ್ವಿಸ್ ಬ್ಯಾಂಕಿನಲ್ಲಿಟ್ಟಿರುವ ಹಣವೆಲ್ಲವೂ ಕಪ್ಪುಹಣವೆಂಬಂತೆ ಬಿಂಬಿಸಬಾರದು ಎಂದು ವರದಿಯಲ್ಲಿ ತಿಳಿಸಲಾಗಿದೆ.