ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸುಮಾರು $ 44 ಬಿಲಿಯನ್‌ಗೆ 100 ಪ್ರತಿಶತ ಪಾಲನ್ನು ಖರೀದಿಸಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಮೈಕ್ರೋಬ್ಲಾಗಿಂಗ್ ಫ್ಲಾಟ್ ಫಾರ್ಮ್ ಅನ್ನು ಮಸ್ಕ್ ಪಡೆದುಕೊಂಡ ನಂತರ, ನೆಟ್ಟಿಗರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವರಲ್ಲಿ ಭಾರತದ ಕ್ರಿಕೆಟಿಗ ಶುಭಮನ್ ಗಿಲ್ ಕೂಡ ಸೇರಿದ್ದಾರೆ.
ಹೌದು, ಕ್ರಿಕೆಟಿಗ ಶುಭಮನ್ ಗಿಲ್ ಅವರು ಎಲೋನ್ ಮಸ್ಕ್ ಗೆ ಟ್ವೀಟ್ ಮೂಲಕ ಸಲಹೆಯೊಂದನ್ನು ನೀಡಿದ್ದಾರೆ. ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಟೆಸ್ಲಾ ಮುಖ್ಯಸ್ಥರಿಗೆ ಟ್ವೀಟ್ ಮುಖಾಂತರ ವಿನಂತಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಆಹಾರವನ್ನು ತಲುಪಿಸದ ಕಾರಣ ಸ್ವಿಗ್ಗಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಎಲೋನ್ ಮಸ್ಕ್ ಅವರನ್ನು ವಿನಂತಿಸಿದ್ದಾರೆ. ಎಲೋನ್ ಮಸ್ಕ್, ದಯವಿಟ್ಟು ಸ್ವಿಗ್ಗಿ ಖರೀದಿಸಿ ಇದರಿಂದ ಅವರು ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಸಹಜವಾಗಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರಿಂದ ಅನೇಕ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವರು ಶುಭಮನ್ ಗಿಲ್ ಅವರ ಮಾತನ್ನು ಒಪ್ಪಲಿಲ್ಲ. ವಿತರಣಾ ಪಾಲುದಾರರಿಗೆ ಸ್ವಲ್ಪ ಸಹಾನುಭೂತಿ ಹೊಂದಲು ಪ್ರಯತ್ನಿಸಿ ಎಂದು ಬಳಕೆದಾರರು ಬರೆದಿದ್ದಾರೆ.
ಸ್ವಿಗ್ಗಿಯ ಅಧಿಕೃತ ಹ್ಯಾಂಡಲ್ ಕೂಡ ಶುಭಮನ್ ಗಿಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದೆ. ನಿಮ್ಮ ಆರ್ಡರ್‌ಗಳೊಂದಿಗೆ ಎಲ್ಲವೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುವುದಾಗಿ ಪೋಸ್ಟ್ ಮಾಡಲಾಗಿದೆ.
ಇನ್ನು ನಕಲಿ ಸ್ವಿಗ್ಗಿ ಖಾತೆ ಕೂಡ ಶುಭಮಾನ್ ಗಿಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಟಿ-20 ಕ್ರಿಕೆಟ್‌ನಲ್ಲಿ ನಿಮ್ಮ ಬ್ಯಾಟಿಂಗ್‌ಗಿಂತ ನಾವು ಇನ್ನೂ ವೇಗದಲ್ಲಿದ್ದೇವೆ ಎಂದು ನಕಲಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
https://twitter.com/swiggysgs/status/1520099978269839360?ref_src=twsrc%5Etfw%7Ctwcamp%5Etweetembed%7Ctwterm%5E1520099978269839360%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fshubman-gill-requests-elon-musk-to-buy-swiggy-in-viral-tweet-here-s-why-1943809-2022-04-30