ಬೆಳಗಾವಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ಇಬ್ಬರು ಸ್ವಾಮೀಜಿಗಳು ಬಂದಿದ್ದರು. ಬಹುಶಃ, ಇಲಾಖೆಗೆ ಸಂಬಂಧ ಪಟ್ಟಂತೆ ಯಾವುದೋ ಸಹಕಾರ ಕೋರಲು ಬಂದಿರಬಹುದು ಎಂದು ಅವರು ಭಾವಿಸಿದ್ದಿರಬಹುದು. ಆದರೆ, ಅವರಿಬ್ಬರ ಬೇಡಿಕೆ ಕೇಳಿ ಒಂದು ಕ್ಷಣ ಸಚಿವರೇ ಕಕ್ಕಾಬಿಕ್ಕಿಯಾಗಿದ್ದಾರೆ.
ಸುವರ್ಣಸೌಧದಲ್ಲಿನ ಗೃಹ ಸಚಿವರ ಕಚೇರಿಗೆ ಬಂದಿದ್ದ ಸ್ವಾಮೀಜಿಗಳು, ನಮ್ಮ ಕಾರುಗಳಿಗೆ ಸೈರನ್ ಬೇಕಾಗಿದ್ದು, ಅನುಮತಿ ನೀಡಿ ಎಂದು ಸಚಿವರಿಗೆ ಲಿಖಿತ ರೂಪದ ಮನವಿ ಸಲ್ಲಿಸಿದ್ದಾರೆ. ಇದನ್ನು ಕೇಳಿದ ಕೂಡಲೇ ಸಚಿವರು, ನಿಮ್ಮ ಕಾರುಗಳಿಗೆ ಸೈರನ್ ಏಕೆ ಬೇಕು ? ನನ್ನ ಕಾರಿಗೇ ಸೈರನ್ ಇಲ್ಲ ಎಂದು ಹೇಳಿದ್ದಾರೆ.
ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಅವಘಡ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ
ಇದಕ್ಕೆ ಉತ್ತರಿಸಿದ ಸ್ವಾಮೀಜಿಗಳು, ಕಾರಿಗೆ ಸೈರನ್ ಇಲ್ಲದ ಕಾರಣ ನಿಗದಿತ ಸಮಯಕ್ಕೆ ನಾವು ಅಂದುಕೊಂಡ ಸ್ಥಳಕ್ಕೆ ತೆರಳಲು ಅಸಾಧ್ಯವಾಗುತ್ತಿದೆ. ನಾವು ಸಂಚರಿಸುತ್ತಿರುವಾಗ ವಾಹನ ದಟ್ಟಣೆ ಏರ್ಪಟ್ಟು, ಮುಂದೆ ಸಾಗಲು ತೊಂದರೆಯಾಗುತ್ತಿದೆ. ಹಲವೆಡೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ನಮಗೆ ಗಮ್ಯ ಸ್ಥಳ ಮುಟ್ಟಲು ತೊಂದರೆಯಾಗುತ್ತಿದ್ದು, ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನು ಕೇಳಿದ ಸಚಿವರು, ಏನೂ ತೋಚದಂತಾಗಿ ಸ್ವಾಮೀಜಿಗಳಿಬ್ಬರಿಗೆ ಆಯಿತು ಈ ಕುರಿತು ನಾನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.