![Kottambari Tambuli Recipe by Archana's Kitchen](https://www.archanaskitchen.com/images/archanaskitchen/1-Author/nithya.anantham/Kottambari_Tambuli_Recipe_Udupi_Style_Raw_Coriander_Kadhi.jpg)
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ ಬೀಜ 1/4 ಕಪ್
ತೆಂಗಿನಕಾಯಿ ತುರಿ 2 ಟೀ ಚಮಚ
ಕಾಳುಮೆಣಸು 8
ಜೀರಿಗೆ 1 ಟೀ ಚಮಚ
ಮಜ್ಜಿಗೆ 1/2 ಲೀಟರ್
ರುಚಿಗೆ ತಕ್ಕಷ್ಟು ಉಪ್ಪು
ಸಾಸಿವೆ 1 ಟೀ ಚಮಚ
ಒಣಮೆಣಸಿನಕಾಯಿ 1
ಎಣ್ಣೆ ಅಥವಾ ತುಪ್ಪ 1 ಟೀ ಚಮಚ
ಮಾಡುವ ವಿಧಾನ
ಮೊದಲು ಸೌತೆಕಾಯಿ ಬೀಜಕ್ಕೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಅದನ್ನು ಸೋಸಿಕೊಳ್ಳಬೇಕು.
ನಂತರ ಬಾಣಲೆಯಲ್ಲಿ ಜೀರಿಗೆ, ಕಾಳುಮೆಣಸು, ಸ್ವಲ್ಪ ತುಪ್ಪವನ್ನು ಹಾಕಿ ಹುರಿಯಬೇಕು. ನಂತರ ಹುರಿದ ಪದಾರ್ಥ, ತೆಂಗಿನಕಾಯಿ ತುರಿ, ಉಪ್ಪು ಮತ್ತು ತಯಾರಿಸಿಕೊಂಡ ಸೌತೆಕಾಯಿ ಬೀಜದ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು.
ನಂತರ ಈ ಮಿಶ್ರಣಕ್ಕೆ ಮೊಸರು ಅಥವಾ ಮಜ್ಜಿಗೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಬೇಕು.
ನಂತರ ಅದಕ್ಕೆ ಸಾಸಿವೆ, ಒಣ ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆಯನ್ನು ಹಾಕಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಸವಿಯಲು ಸಿದ್ಧ.