ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1/2 ಕಪ್, ಖೋವಾ – 1/4 ಕಪ್, ಸಕ್ಕರೆ – ಸಕ್ಕರೆ 1/2 ಕಪ್, ಹಾಲು – 3/4 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು, ಸಕ್ಕರೆ – 1/2 ಕಪ್, ನೀರು – 1/2 ಕಪ್, ಕೇಸರಿ ಎಸಳು – 5, ಏಲಕ್ಕಿ ಪುಡಿ – ಚಿಟಿಕೆ.
ಮಾಡುವ ವಿಧಾನ:
ಒಂದು ಬೌಲ್ ಗೆ ½ ಕಪ್ ಬಿಸಿ ಹಾಲು ಹಾಕಿ ಅದಕ್ಕೆ ಖೋವಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮೈದಾ ಹಿಟ್ಟು, ½ ಟೇಬಲ್ ಸ್ಪೂನ್ ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ½ ಕಪ್ ನೀರು, ½ ಕಪ್ ಸಕ್ಕರೆ ಹಾಕಿ ಒಂದು ಕುದಿ ಕುದಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ಕೇಸರಿ ದಳ ಸೆರಿಸಿ ಗ್ಯಾಸ್ ಆಫ್ ಮಾಡಿ.
ಗ್ಯಾಸ್ ಮೇಲೆ ಎಣ್ಣೆ ಕಡಾಯಿ ಇಟ್ಟು ಅದಕ್ಕೆ ಮಾಡಿಟ್ಟುಕೊಂಡ ಮೈದಾ ಮಿಶ್ರಣವನ್ನು ಒಂದು ಸೌಟಿನ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡು ಸಕ್ಕರೆ ಪಾಕಕ್ಕೆ ಹಾಕಿ 2 ನಿಮಿಷಗಳ ಕಾಲ ಮುಳುಗಿಸಿ ಆಮೇಲೆ ಬೇರೊಂದು ತಟ್ಟೆಗೆ ತೆಗೆದುಕೊಳ್ಳಿ. ಬಿಸಿ ಬಿಸಿ ಇರುವಾಗ ಸವಿಯುವುದಕ್ಕೆ ಚೆನ್ನಾಗಿರುತ್ತದೆ.