75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ದೇಶವಾಸಿಗಳು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಮೇಲೆ ಮೂರು ದಿನಗಳ ಕಾಲ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತಮ್ಮ ದೇಶಪ್ರೇಮ ಮೆರೆದಿದ್ದಾರೆ. ಇದೀಗ ಸ್ವಾತಂತ್ರ್ಯ ದಿನಾಚರಣೆ ಪೂರ್ಣಗೊಂಡಿದ್ದು, ಆದರೆ ತ್ರಿವರ್ಣ ಧ್ವಜವನ್ನು ಯಾವ ರೀತಿ ಸಂರಕ್ಷಿಸಿಡಬೇಕು ಎಂಬ ಕುರಿತು ಬಹುತೇಕರಿಗೆ ಅರಿವಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.
ಮನೆ ಅಥವಾ ಕಚೇರಿ ಮೇಲೆ ಹಾರಿಸಿರುವ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಕೆಳಗಿಳಿಸಿದ ಬಳಿಕ ಮೊದಲು ಸಮತಟ್ಟಾದ ಜಾಗದಲ್ಲಿ ಹಾಸಬೇಕು. ಬಳಿಕ ಬಿಳಿ ಬಣ್ಣದ ಕೆಳಗೆ ಕೇಸರಿ, ಹಸಿರು ಬಣ್ಣ ಇರುವಂತೆ ಮಡಿಚಿ ನಂತರ ಅಶೋಕ ಚಕ್ರ ಮಾತ್ರ ಕಾಣುವಂತೆ ಎರಡು ಬದಿಯಿಂದ ಮಡಚಿಡಬೇಕು. ಇದನ್ನು ಸುರಕ್ಷಿತವಾಗಿ ಇಟ್ಟು ಬಳಿಕ ಬೇಕೆಂದಾಗ ಬಳಸಬಹುದಾಗಿದೆ.