ಸ್ವಯಂ ಉದ್ಯೋಗ ಆರಂಭಿಸಲು ಬಯಸಿರುವ 18 ರಿಂದ 35 ವರ್ಷದೊಳಗಿನ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2022 – 23ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕಾಗಿ ವೈಯಕ್ತಿಕ ಸಾಲ ನೀಡಲು ಆಸಕ್ತರಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು https://suvidha.karnataka.gov.in ಸುವಿಧಾ ಜಾಲತಾಣದಲ್ಲಿ ಆಗಸ್ಟ್ 24 ರೊಳಗೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ www.dbcdc.karnataka.gov.in ಅಥವಾ ಸಹಾಯವಾಣಿ ದೂರವಾಣಿ ಸಂಖ್ಯೆ 080-22374832 ಸಂಪರ್ಕಿಸಬಹುದಾಗಿದೆ.