![](https://kannadadunia.com/wp-content/uploads/2018/12/Couple_Bed_732x549-thumbnail-732x549-1.jpg)
ನಿದ್ರೆಯಲ್ಲಿ ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇಂದು ಕೆಟ್ಟ ಕನಸು ಬಿದ್ದಿತ್ತು, ಇಂದು ವಿಚಿತ್ರ ಕನಸು ಬಿದ್ದಿತ್ತು ಅಂತಾ ಹೇಳ್ತಿರುತ್ತೇವೆ. ಸ್ವಪ್ನ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲ ಸ್ವಪ್ನಗಳು ದುಃಖದ ಸಂಕೇತ ನೀಡಿದ್ರೆ ಕೆಲ ಸ್ವಪ್ನಗಳು ಅದೃಷ್ಟದ ಸಂಕೇತ ನೀಡುತ್ತವೆ.
ಕೆಲವೊಮ್ಮೆ ಸಂಭೋಗದ ಕನಸು ಬೀಳುತ್ತದೆ. ಪತಿ, ಪತ್ನಿ ಅಥವಾ ಪ್ರೇಮಿಗಳ ಜೊತೆ ಸಂಬಂಧ ಬೆಳೆಸಿದಂತೆ ಕನಸು ಬೀಳುತ್ತದೆ. ಈ ಕನಸು ಸ್ವಲ್ಪ ವಿಚಿತ್ರವೆನಿಸುವ ಜೊತೆಗೆ ಸ್ವಪ್ನವನ್ನು ಮರೆಯಲು ಕಷ್ಟವಾಗುತ್ತದೆ. ವಿಚಿತ್ರ ಕನಸು ಎರಡು ವಿಭಿನ್ನವಾದ ಅರ್ಥವನ್ನು ನೀಡುತ್ತದೆ. ಒಂದು ಪತಿ-ಪತ್ನಿ ಮಧ್ಯೆ ಸಂಬಂಧ ಚೆನ್ನಾಗಿದೆ ಎಂದರ್ಥ. ಇನ್ನೊಂದು ಸಂಗಾತಿಯಿಂದ ಬಯಸಿದ್ದು ಸಿಗುತ್ತಿಲ್ಲ ಎಂಬುದು.
ಕನಸಿನಲ್ಲಿ ನೆಚ್ಚಿನ ನಟಿ ಅಥವಾ ನಟನ ಜೊತೆ ಸಂಬಂಧ ಬೆಳೆಸಿದಂತೆ ಕಂಡ್ರೆ ನೀವು ಬಯಸಿದ್ದೆಲ್ಲ ಪಾಲುದಾರರಿಂದ ಸಿಕ್ಕಿಲ್ಲ ಎಂದರ್ಥ. ನೆಚ್ಚಿನ ನಟ ಅಥವಾ ನಟಿ ಸೌಂದರ್ಯದ ಜೊತೆ ಅವ್ರ ಯಶಸ್ಸನ್ನು ನಿಮ್ಮ ಸಂಗಾತಿಯಲ್ಲಿ ನೋಡಲು ಬಯಸುತ್ತಿದ್ದೀರಿ. ಇದು ಸಿಗ್ತಿಲ್ಲವೆಂದರ್ಥ ನೀಡುತ್ತದೆ.