ಮೈಸೂರು: ಗ್ಯಾಸ್ ಪೈಪ್ ಲೈನ್ ಯೋಜನೆ ಉದ್ದೇಶ, ಪ್ರಯೋಜನಗಳ ಬಗ್ಗೆ ವಿವರ ನೀಡಿದ ಸಂಸದ ಪ್ರತಾಪ್ ಸಿಂಹ ಗ್ಯಾಸ್ ಪೈಪ್ ಲೈನ್ ವಿರೋಧಿಸುತ್ತಿರುವ ಸ್ವಪಕ್ಷೀಯ ಶಾಸಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ, ಮನೆಗಳಿಗೆ ಪೈಪ್ ಮೂಲಕ ನೇರ ಗ್ಯಾಸ್ ಸಂಪರ್ಕಕ್ಕೆ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಮೊಬೈಲ್ ಕಂಪನಿಗಳು ರಸ್ತೆ ಅಗೆದಾಗ ಸುಮ್ಮನಿದ್ದರು. ಖಾಸಗಿ ಕಂಪನಿಯವರು ಕೇಬಲ್ ಅಳವಡಿಕೆ ಮಾಡುವಾಗ ಮಾತನಾಡಲಿಲ್ಲ. ಈಗ ಗ್ಯಾಸ್ ಪೈಪ್ ಲೈನ್ ಅಳವಡಿಕೆಗೆ ರಸ್ತೆ ಅಗೆಯುತ್ತಾರೆ ಎಂದು ವಿರೋಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಗ್ಯಾಸ್ ಪೈಪ್ ಲೈನ್ ಅಳವಡಿಸುವವರೇ ರಸ್ತೆಯನ್ನು ಸರಿ ಮಾಡ್ತಾರೆ. ಪೈಪ್ ಲೈನ್ ಬಳಸಿದ ಜಾಗಕ್ಕೆ ಪಾಲಿಕೆ ಹಣ ಕೊಡುತ್ತೆ. ಲೈನ್ ಗೆ ತೆಗೆದ ಹಳ್ಳವನ್ನು 24 ಗಂಟೆಯಲ್ಲಿ ಮುಚ್ಚಲಾಗುತ್ತೆ. ಅಭಿವೃದ್ಧಿ ಕೆಲಸಕ್ಕೂ ಅಡ್ಡಿಪಡಿಸುವುದು ಎಂದರೇನು ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ಯಾಸ್ ಸ್ಫೋಟದಂತಹ ಪ್ರಕರಣ ತಪ್ಪಿಸಲು ಪೈಪ್ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗುವುದು. ನ್ಯಾಚುರಲ್ ಗ್ಯಾಸ್ ಎಲ್ಪಿಜಿಗಿಂತ ಕಡಿಮೆ ಅಪಾಯಕಾರಿ. ನೇರ ಗ್ಯಾಸ್ ಸಂಪರ್ಕದಿಂದ ಕಡಿಮೆ ಬೆಲೆಗೆ ಎಲ್ ಪಿ ಜಿ ಪ್ರಮಾಣ ತೆಗೆದುಕೊಂಡರೆ 500-550 ರೂ. ಒಳಗೆ ಗ್ಯಾಸ್ ದೊರೆಯುತ್ತದೆ 400 ರೂ.ರಷ್ಟು ಉಳಿತಾಯವಾಗಲಿದೆ ಎಂದು ಹೇಳಿದರು.