ತಮ್ಮದೇ ಆದ ಸ್ವಂತ ಸೂರು ಹೊಂದುವುದು ಎಲ್ಲರ ಕನಸಾಗಿರುತ್ತದೆ. ಇದನ್ನು ನನಸು ಮಾಡಿಕೊಳ್ಳಲು ಮುಂದಾದರೆ ಬ್ಯಾಂಕುಗಳಲ್ಲಿನ ಸಾಲ ಹಾಗೂ ಅದರ ಬಡ್ಡಿದರ ಸಮಸ್ಯೆಯಾಗಿ ಕಾಡುತ್ತಿತ್ತು.
ಇದೀಗ ದೇಶದ ಅತಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಬ್ಬದ ಕೊಡುಗೆಯಾಗಿ ಶೇ.0.25 ರ ವರೆಗೆ ರಿಯಾಯಿತಿ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಮುಂದಾಗಿದೆ. ಗೃಹ ಸಾಲದ ಮೇಲಿನ ಬಡ್ಡಿದರ ಶೇ.8.40 ರಿಂದ ಆರಂಭ ಆಗಲಿದೆ.
ಅಲ್ಲದೆ ಗೃಹ ಸಾಲಗಳಿಗೆ 2023ರ ಜನವರಿ 31 ರವರೆಗೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದ್ದು, ಜೊತೆಗೆ ಟಾಪ್ ಅಪ್ ಲೋನ್ ಬಡ್ಡಿ ದರ ಶೇ.8.80 ರಿಂದ ಆರಂಭವಾಗಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.