ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದಿರಲಿ ಕಡಿಮೆ ಬೆಲೆಗೆ ಬಾಡಿಗೆ ಮನೆ ಸಿಗುವುದೂ ಸಹ ಕಷ್ಟ. ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡಲು ಮುಂದಾಗಿದೆ.
ಹೌದು, ಕೊರೊನಾ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ಒಂಟಿ ಮನೆ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ದೊರೆಯಲಿದೆ. ಇದಕ್ಕಾಗಿ ಕೆಲವೊಂದು ಫರತ್ತುಗಳನ್ನೂ ವಿಧಿಸಲಾಗಿದೆ.
ಫಲಾನುಭವಿಗಳಾಗುವರು ಕನಿಷ್ಠ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರಬೇಕು. ಅಲ್ಲದೆ ಅರ್ಜಿದಾರನು ಸ್ವಂತ ನಿವೇಶನ ಹೊಂದಿದ್ದು ಗರಿಷ್ಠ 600 ಅಡಿ ಜಾಗವಿರಬೇಕು. ವಾರ್ಷಿಕ ಆದಾಯ ಎಲ್ಲ ವರ್ಗದವರಿಗೂ 2.5 ಲಕ್ಷ ರೂಪಾಯಿಗಳಾಗಿದ್ದು, ಬೇರೆ ಇಲಾಖೆಗಳಿಂದ ಮನೆ ಕಟ್ಟಲು ಆರ್ಥಿಕ ನೆರವು ಪಡೆದಿರಬಾರದು ಎಂದು ತಿಳಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಯೋಜನೆಗೆ ಚಾಲನೆ ಸಿಕ್ಕ ಬಳಿಕ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.