ಸ್ಲೀವ್ ಲೆಸ್ ಉಡುಪು ನಿಮಗೆ ಬಹಳ ಇಷ್ಟವೇ, ಆದರೆ ಅದನ್ನು ಧರಿಸಲು ಮುಜುಗರ ಪಡುತ್ತೀರಾ, ಹಾಗಾದರೆ ನಿಮಗಾಗಿಯೇ ಕೆಲವು ಟಿಪ್ಸ್ ಗಳಿವೆ ಕೇಳಿ. ಸ್ಲೀವ್ ಲೆಸ್ ಟಾಪ್ ತೆಗೆದುಕೊಳ್ಳುವ ಮೊದಲು ಈ ಅಂಶಗಳತ್ತವೂ ಗಮನ ಹರಿಸಿ.
ನಿಮ್ಮ ಕೈ ದಪ್ಪಗಿದೆ ಅಥವಾ ಟ್ಯಾನ್ ಆಗಿದೆ ಎಂಬ ಕಾರಣಕ್ಕೆ ನೀವು ಸ್ಲೀವ್ ಲೆಸ್ ಉಡುಪು ಧರಿಸುವುದರಿಂದ ಹಿಂದೇಟು ಹಾಕಿದ್ದರೆ ಉಡುಪು ಕೊಳ್ಳುವಾಗ ವಿ ಆಕಾರದ ನೆಕ್ ಡಿಸೈನ್ ಗೆ ಆದ್ಯತೆ ನೀಡಿ. ಇದರಿಂದ ನಿಮ್ಮನ್ನು ನೋಡುವವರ ಕಣ್ಣು ಕುತ್ತಿಗೆಯ ಮೇಲೆ ಹೋಗುತ್ತದೆಯೇ ವಿನಃ ಕೈಗಳನ್ನು ಗಮನಿಸುವುದಿಲ್ಲ.
ಚೈನೀಸ್ ಕಾಲರ್ ಹೊಂದಿರುವ ಉಡುಪನ್ನು ಧರಿಸುವುದರಿಂದ ತೋಳು ಹೆಚ್ಚು ದಪ್ಪ ಕಾಣಿಸುವುದಿಲ್ಲ. ಹೈ ಅಥವಾ ಹಾಲ್ಟಾರ್ ನೆಕ್ ಗೆ ಆದ್ಯತೆ ನೀಡುವುದರಿಂದಲೂ ನೀವು ತೋಳುಗಳು ಸಣ್ಣದಾಗಿ ಆಕರ್ಷಕವಾಗಿ ಕಾಣುವಂತೆ ಮಾಡಬಹುದು.
ಕೈಯಲ್ಲಿ ಟ್ಯಾನ್ ಗಳಿದ್ದರೆ ಕ್ರೀಮ್ ಬಳಸಿ ಅದನ್ನು ಮರೆಮಾಚಬಹುದು. ಕೈಗಳಿಗೆ ಸಡಿಲವಾಗಿರುವ ಬ್ರೇಸ್ ಲೈಟ್ ಕಟ್ಟಿ, ವಾಚ್ ಹಾಕಿದರೂ ಸಡಿಲವಾಗಿರಲಿ. ಕೈತುಂಬಾ ಬಳೆ ಹಾಕುವುದನ್ನು ಈ ಸಂದರ್ಭದಲ್ಲಿ ತಪ್ಪಿಸಿ.