ದಿನನಿತ್ಯದ ಬದುಕಿನಲ್ಲಿ ನಾವು ಉಪಯೋಗಿಸುವ ವಸ್ತುಗಳು ನಮಗೆ ಕಂಫರ್ಟ್ ನೀಡುತ್ತವೆ. ಸ್ಲಿಪ್ಪರ್ ಅಥವಾ ಚಪ್ಪಲಿ ಕೂಡ ಅವುಗಳಲ್ಲೊಂದು. ಇದನ್ನು ನಾವು ಹವಾಯಿ ಚಪ್ಪಲಿ ಎಂದು ಕರೆಯುತ್ತೇವೆ. ಈ ವಿಶಿಷ್ಟ ಹೆಸರಿನ ಹಿಂದೆ ಇಂಟ್ರೆಸ್ಟಿಂಗ್ ಇತಿಹಾಸವೇ ಇದೆ.
ಹವಾಯಿ ಚಪ್ಪಲಿ ಎಂಬ ಹೆಸರಿಗೂ ಹವಾಯಿ ದ್ವೀಪಗಳಿಗೂ ಸಂಬಂಧವಿದೆ. ಫೆಸಿಪಿಕ್ ಸಮುದ್ರದ ಮಧ್ಯದಲ್ಲಿರೋ ಜ್ವಾಲಾಮುಖಿ ದ್ವೀಪ ಇದು. ಈ ದ್ವೀಪದಲ್ಲಿ ಟಿ ಎಂದು ಕರೆಯಲ್ಪಡುವ ವಿಶೇಷ ಮರಗಳಿವೆ. ಈ ಮರಗಳಿಂದ ರಬ್ಬರ್ ರೀತಿಯ ವಸ್ತುವನ್ನು ಹೊರತೆಗೆಯಲಾಗುತ್ತದೆ. ಅವುಗಳಿಂದಲೇ ಚಪ್ಪಲಿಗಳು ತಯಾರಾಗುತ್ತವೆ.
ಇದೇ ಕಾರಣಕ್ಕೆ ಹವಾಯಿ ಚಪ್ಪಲಿ ಎಂಬ ಹೆಸರು ಬಂದಿದೆ. 1962ರಲ್ಲಿ ಬ್ರೆಝಿಲ್‌ನ ಹವಾಯಿಯನ್ ಎಂಬ ಕಂಪನಿ ಈ ಹವಾಯಿ ಚಪ್ಪಲಿಗಳನ್ನು ತಯಾರಿಸಲು ಆರಂಭಿಸಿತ್ತು. ನೀಲಿ ಹಾಗೂ ಬಿಳಿ ಬಣ್ಣದ ಕಾಂಬಿನೇಷನ್‌ನಲ್ಲಿ ಮೊದಲು ಹವಾಯಿ ಚಪ್ಪಲಿಗಳನ್ನು ತಯಾರಿಸಲಾಯ್ತು. ಇದೇ ಬಣ್ಣದ ಸ್ಲಿಪ್ಪರ್‌ಗಳು ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
ಪ್ಲಾಂಟೇಶನ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಎಲ್ಮರ್ ಸ್ಕಾಟ್ ಎಂಬುವವರು ರಬ್ಬರ್ ಬೂಟ್‌ಗಳನ್ನು ತಯಾರಿಸುತ್ತಿದ್ರು. ಎರಡನೇ ಮಹಾಯುದ್ಧದಿಂದಾಗಿ ಅದಕ್ಕೆ ಬೇಕಾದ ರಬ್ಬರ್ ಕೊರತೆ ಎದುರಾಯ್ತು. ಹಾಗಾಗಿ ಬೂಟ್‌ಗಳ ಉತ್ಪಾದನೆ ನಿಲ್ಲಿಸಿದ ಅವರು ಜಲಾಂತರ್ಗಾಮಿಗಳಿಗಾಗಿ ಸ್ಯಾಂಡಲ್‌ಗಳನ್ನು ತಯಾರಿಸಲು ಶುರು ಮಾಡಿದ್ರು.
ಎರಡನೇ ಮಹಾಯುದ್ಧ ಮುಗಿದ ಬಳಿಕ ಎಲ್ಮರ್ಟ್ ಸ್ಕಾಟ್ ಸ್ಲಿಪ್ಪರ್‌ಗಳನ್ನು ತಯಾರಿಸಲು ಆರಂಭಿಸಿದ್ದರು. ಸ್ಕಾಟ್ ಈಗ ಬದುಕಿಲ್ಲ, ಆದ್ರೆ ಸ್ಲಿಪ್ಪರ್‌ಗಳು ಮಾತ್ರ ಇವತ್ತಿಗೂ ಸಾಕಷ್ಟು ಪ್ರಯೋಜನಕಾರಿ ಎನಿಸಿಕೊಂಡಿವೆ. ಸ್ಕಾಟ್ ಪುತ್ರ ಸ್ಟೀವ್ ಈಗ ಚಪ್ಪಲಿ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗ್ತಿದ್ದಾನೆ. ಆತನಿಗೂ ಇಬ್ಬರು ಗಂಡುಮಕ್ಕಳಿದ್ದು, ಅವರೂ ತಂದೆಗೆ ನೆರವಾಗುತ್ತಿದ್ದಾರೆ. ಮಳಿಗೆಗೆ ಸ್ಕಾಟ್ ಹವಾಯಿ ಎಂದು ಹೆಸರಿಟ್ಟಿದ್ದಾರೆ.
ಈ ಹವಾಯಿ ಚಪ್ಪಲಿಗಳನ್ನು ಬಾಟಾ ಕಂಪನಿ ಭಾರತಕ್ಕೆ ಪರಿಚಯಿಸಿತ್ತು. 1931ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಾಟಾ ಕಂಪನಿ ತಲೆಎತ್ತಿತ್ತು. ಬಾಟಾ ಕಂಪನಿಗಳ ಪಾದರಕ್ಷೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಇದೇ ಕಾರಣಕ್ಕೆ ಸಂಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.