ಮೊಬೈಲ್ ಫೋನ್ ಈಗ ಅನಿವಾರ್ಯವಾಗ್ಬಿಟ್ಟಿದೆ. ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯುವುದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬ್ಯುಸಿಯಾಗಿರ್ತಾರೆ. ಇಂಟರ್ನೆಟ್ ಇಲ್ಲದ ವೇಳೆ ಕುಟುಂಬದಲ್ಲೊಂದು ಆಪ್ತತೆ ಇತ್ತು.
ಒಂದಾಗಿ ಕುಳಿತು ಮಾತನಾಡಲು ಸಮಯವಿತ್ತು. ಪತಿ-ಪತ್ನಿ ಸಂಬಂಧದಲ್ಲೊಂದು ರುಚಿ ಇತ್ತು. ಆದ್ರೀಗ ಸಂಬಂಧ ರುಚಿ, ಬೆಚ್ಚಗಿನ ಅಪ್ಪುಗೆಯನ್ನು ಕಳೆದುಕೊಂಡಿದೆ. ಮನೆಯಲ್ಲಿ ನಾಲ್ಕು ಜನರಿದ್ದರೂ ಮೌನ ಆವರಿಸಿರುತ್ತದೆ. ಮಾತುಕತೆ ಇಲ್ಲ, ನಗುವಿಲ್ಲ. ಎಲ್ಲರ ಕೈನಲ್ಲೂ ಮೊಬೈಲ್, ಎಲ್ಲರೂ ಮೊಬೈಲ್ ನಲ್ಲಿ ಬ್ಯುಸಿ.
ಪತಿ-ಪತ್ನಿ ಸಂಬಂಧ ಈ ಇಂಟರ್ನೆಟ್ ನಿಂದಾಗಿ ಹದಗೆಡ್ತಾ ಇದೆ. ಪತ್ನಿ, ಪತಿ ಜೊತೆ ಕಡಿಮೆ ಸಮಯ ಕಳೆಯುತ್ತಿದ್ದಾಳೆ. ಮೊದಲಿನ ಪ್ರೀತಿ, ಮಾತು, ಹುಸಿ ಮುನಿಸು ಕಡಿಮೆಯಾಗಿದೆ ಎಂದಾದ್ರೆ ಇದಕ್ಕೆ ಕಾರಣ ಮತ್ತ್ಯಾವುದೂ ಅಲ್ಲ, ನಿಶ್ಚಿತವಾಗಿ ಸ್ಮಾರ್ಟ್ ಫೋನ್.
ಪತಿ ಇಲ್ಲದೆ ಒಂದು ವಾರ ಕಳೆಯುತ್ತೇವೆ, ಆದ್ರೆ ಸ್ಮಾರ್ಟ್ ಫೋನ್ ಇಲ್ಲದೆ ಒಂದು ಗಂಟೆ ಕಳೆಯೋದು ಕಷ್ಟ ಎಂದಿದ್ದಾರೆ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಶೇಕಡಾ 20 ರಷ್ಟು ಮಹಿಳೆಯರು. ವಾರದಲ್ಲಿ ಸುಮಾರು 12 ಗಂಟೆಗೂ ಹೆಚ್ಚು ಕಾಲವನ್ನು ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿದ್ದಾರಂತೆ. ಇದರಿಂದಾಗಿ ಕೋಪ, ಭಯ, ಒತ್ತಡ ಜಾಸ್ತಿಯಾಗ್ತಿದೆಯಂತೆ.