ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನಕ್ಕೆ, ಫೋಟೋ ತೆಗೆಯಲು, ದಾಖಲೆಗಳನ್ನು ಸೇವ್ ಮಾಡಿಕೊಳ್ಳಲು, ಇಂಟರ್ನೆಟ್ ಬ್ರೌಸಿಂಗ್ ಗೆ, ಉಳಿದ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್ ಆಗಿಯೂ ನಾವು ಅದನ್ನು ಬಳಸುತ್ತೇವೆ.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಮೊಬೈಲ್ ಗಳು ಲಭ್ಯವಿರೋದ್ರಿಂದ ಯಾವುದನ್ನು ಕೊಂಡುಕೊಳ್ಳುವುದು ಅನ್ನೋ ಗೊಂದಲ ಸಹಜ. ಸ್ಮಾರ್ಟ್ ಫೋನ್ ಆಯ್ಕೆಗೆ ಕೆಲವು ಟಿಪ್ಸ್ ಇಲ್ಲಿದೆ.
ಬಿಲ್ಡ್ ಗುಣಮಟ್ಟ : ಬಿಲ್ಡ್ ಎಂದರೆ ಸ್ಮಾರ್ಟ್ ಫೋನ್ ನ ಬಾಳಿಕೆ. ಮಾರುಕಟ್ಟೆಯಲ್ಲಿ 2 ಬಗೆಯ ಬಿಲ್ಡ್ ಇದೆ – ಲೋಹ ಮತ್ತು ಪ್ಲಾಸ್ಟಿಕ್. ಗಾಜಿನಿಂದಾವೃತವಾದ ಪ್ಯಾನಲ್ ಗಳು ಕೂಡ ಸಿಗುತ್ತವೆ. ನಿಮಗೆ ಪದೇ ಪದೇ ಮೊಬೈಲ್ ಕೆಳಕ್ಕೆ ಬೀಳಿಸೋ ಅಭ್ಯಾಸವಿದ್ರೆ ಮೆಟಲ್ ಅಥವಾ ಪ್ಲಾಸ್ಟಿಕ್ ಹ್ಯಾಂಡ್ ಸೆಟ್ ಕೊಳ್ಳುವುದು ಉತ್ತಮ.
ಡಿಸ್ ಪ್ಲೇ : ಗಾತ್ರ ಹಾಗೂ ರೆಸಲ್ಯೂಶನ್ ನೀವು ಸ್ಮಾರ್ಟ್ ಫೋನ್ ಅನ್ನು ಯಾವ ರೀತಿ ಬಳಸುತ್ತೀರಾ ಅನ್ನೋದನ್ನು ಅವಲಂಬಿಸಿರುತ್ತದೆ. ಹೆಚ್ಚಾಗಿ ವಿಡಿಯೋ ನೋಡ್ತಿದ್ರೆ, ಫೋಟೋ ಎಡಿಟ್ ಮಾಡ್ತಿದ್ರೆ, ವಿಡಿಯೋಗಳನ್ನು ಡೌನ್ ಲೋಡ್ ಮಾಡುತ್ತಿದ್ರೆ 5.5-6 ಇಂಚು ಡಿಸ್ ಪ್ಲೇ ಇರುವ ಸ್ಮಾರ್ಟ್ ಫೋನ್ ಕೊಂಡುಕೊಳ್ಳಿ. ಫುಲ್ ಎಚ್ ಡಿ ಅಥವಾ ಕ್ಯೂಎಚ್ ಡಿ ಡಿಸ್ ಪ್ಲೇ ಬೆಸ್ಟ್. 6 ಇಂಚಿಗಿಂತ ದೊಡ್ಡದಿದ್ದರೆ ಅದನ್ನು ಕ್ಯಾರಿ ಮಾಡುವುದು ಕಷ್ಟ.
ಪ್ರೊಸೆಸರ್ : ಸ್ಮಾರ್ಟ್ ಫೋನ್ ಗಳ ಪ್ರೊಸೆಸಿಂಗ್ ಪವರ್ ವಿಭಿನ್ನವಾಗಿರುತ್ತದೆ. ನೀವು ಅತಿಯಾಗಿ ಮೊಬೈಲ್ ಬಳಸುವವರಾದ್ರೆ Qualcomm Snapdragon ಇರುವ ಸ್ಮಾರ್ಟ್ ಫೋನ್ ಖರೀದಿಸಿ. ಇಲ್ಲವಾದಲ್ಲಿ ಮೀಡಿಯಾಟೆಕ್ ಪ್ರೊಸೆಸರ್ ಇರುವ ಹ್ಯಾಂಡ್ ಸೆಟ್ ಸಾಕು.
ಜಾಸ್ತಿ ಮೆಗಾಪಿಕ್ಸಲ್ ಇದೆ ಎಂದಾಕ್ಷಣ ಸ್ಮಾರ್ಟ್ ಫೋನ್ ನ ಕ್ಯಾಮರಾ ಚೆನ್ನಾಗಿರುತ್ತದೆ ಎಂದರ್ಥವಲ್ಲ. ಐಎಸ್ಓ ಲೆವಲ್, ಪಿಕ್ಸಲ್ ಸೈಜ್, ಆಟೋ ಫೋಕಸ್ ಎಲ್ಲವೂ ಪ್ರಮುಖವಾಗಿರುತ್ತದೆ. ಪಿಕ್ಸಲ್ ಜಾಸ್ತಿ ಇದೆ ಎಂದರೆ ಇಮೇಜ್ ಗಾತ್ರ ದೊಡ್ಡದಿದೆ ಎಂದರ್ಥ. 12 ಅಥವಾ 16 ಮೆಗಾಪಿಕ್ಸಲ್ ಸೆನ್ಸಾರ್, f/2.0 ದ್ಯುತಿರಂಧ್ರವಿದ್ದರೆ ಸಾಕು.
ಬ್ಯಾಟರಿ : ಬ್ಯಾಟರಿ ಬಳಕೆ ಗ್ರಾಹಕರಿಂದ ಗ್ರಾಹಕರಿಗೆ ಭಿನ್ನವಾಗಿರುತ್ತದೆ, ಅವರು ಸ್ಮಾರ್ಟ್ ಫೋನನ್ನು ಯಾವ ರೀತಿ ಬಳಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆ್ಯಪ್, ಗೇಮ್ಸ್, ವಿಡಿಯೋ ಹೀಗೆ ಅತಿಯಾಗಿ ನೀವು ಮೊಬೈಲ್ ಬಳಸುತ್ತೀರಾ ಎಂದಾದರೆ ಕನಿಷ್ಟ 3500 mAhನ ಬ್ಯಾಟರಿ ಹೊಂದಿರಬೇಕು. ಮೊಬೈಲ್ ಬಳಕೆ ಕೊಂಚ ಕಡಿಮೆ ಅಂತಾದ್ರೆ 3000 mAh ಬ್ಯಾಟರಿ ಸಾಕು.