ಬ್ರಾಹ್ಮೀ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಬ್ರಾಹ್ಮೀ, ಒಂದೆಲಗ, ತಿಮರೆ ಎಂದು ಕರೆಯಲ್ಪಡುವ ಇದರ ರಸವನ್ನು ಗರ್ಭಿಣಿಯರು ನಿತ್ಯ ಕುಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಹುಟ್ಟುವ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ.
ಹೃದ್ರೋಗದಿಂದ ಬಳಲುವವರು ಈ ರಸವನ್ನು ಪ್ರತಿ ನಿತ್ಯ ಕುಡಿಯುವುದು ಒಳ್ಳೆಯದು. ಮೂತ್ರ ವಿಸರ್ಜನೆ ಸಮಯದಲ್ಲಿ ಉರಿ ಆಗುತ್ತಿದ್ದರೆ ಬ್ರಾಹ್ಮೀ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ಬೆಳಗ್ಗೆ ನಾಲ್ಕರಿಂದ ಐದು ಬ್ರಾಹ್ಮೀ ಎಲೆಯನ್ನು ಕಲ್ಲು ಸಕ್ಕರೆ ಜೊತೆ ಸೇವಿಸಲು ಕೊಡಿ.
ಸಂಧಿವಾತ ಕಡಿಮೆಯಾಗಲು ಎಳ್ಳೆಣ್ಣೆಗೆ ಬ್ರಾಹ್ಮೀ ಎಲೆಯ ರಸ ಬೆರೆಸಿ ಬಳಸಿ. ನರ ದೌರ್ಬಲ್ಯದಿಂದ ಬಳಲುತ್ತಿರುವವರು ಬ್ರಾಹ್ಮಿ ಎಲೆಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಸ್ಮರಣಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.