
ಬೇಕಾಗುವ ಸಾಮಾಗ್ರಿಗಳು
ಪಚ್ಚ ಬಾಳೆಹಣ್ಣು – 1
ಜೋಳದ ಹಿಟ್ಟು – 1 ಕಪ್
ಕೆನೆ ಹಾಲು – 1 ಕಪ್
ಬೇಕಿಂಗ್ ಸೋಡಾ – 1/2 ಚಮಚ
ಬೆಲ್ಲ – ಸ್ವಲ್ಪ
ತುಪ್ಪ – ಸ್ವಲ್ಪ
ಡ್ರೈ ಫ್ರೂಟ್ಸ್ – ಸ್ವಲ್ಪ
ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ಬೆಲ್ಲ, ತುಪ್ಪ, ಬೇಕಿಂಗ್ ಸೋಡಾ, ಹಾಲು ಮತ್ತು ಜೋಳದ ಹಿಟ್ಟು ಎಲ್ಲವನ್ನೂ ಹಾಕಿ ಚೆನ್ನಾಗಿ ಎರಡು ನಿಮಿಷ ಕಲಸಿ ಮಿಕ್ಸಿ ಮಾಡಿಕೊಳ್ಳಬೇಕು. ನಂತರ ಒಂದು ತುಪ್ಪ ಸವರಿದ ಪಾತ್ರೆಗೆ ಮಿಶ್ರಣವನ್ನು ಹಾಕಬೇಕು. ನಂತರ ಅದರ ಮೇಲೆ ಡ್ರೈ ಫ್ರುಟ್ಸ್ ಅನ್ನು ಉದುರಿಸಬೇಕು. ನಂತರ ಸ್ವಲ್ಪ ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಹದಿನೈದು ನಿಮಿಷ ಸಣ್ಣ ಉರಿಯಲ್ಲಿ ಇಡಬೇಕು.
ಸ್ವಲ್ಪ ಹೊತ್ತಿನ ಬಳಿಕ ಚಾಕುವಿನಿಂದ ಅಥವಾ ಚಮಚದಿಂದ ಚುಚ್ಚಿ ನೋಡಬೇಕು. ಮಿಶ್ರಣ ಅಂಟಿಲ್ಲ ಎಂದಾದರೆ ರುಚಿಯಾದ ಸವಿಯಾದ ಬಾಳೆಹಣ್ಣಿನ ಕೇಕ್ ಸವಿಯಲು ಸಿದ್ಧ.