
ಈ ಕಾರ್ಯಕ್ರಮವನ್ನು ಈ ವರ್ಷದ ಆರಂಭದಲ್ಲಿ ಏರ್ಪಡಿಸಲಾಗಿದ್ದು, ವಿಡಿಯೋವನ್ನು ಐಟಿಬಿಪಿ ಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪ್ರೇರಣಾದಾಯಕ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದುವರೆಗೆ 49,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥುರ್ ಅವರ ವಿಡಿಯೋದೊಂದಿಗೆ ಪ್ರಾರಂಭವಾಗುತ್ತದೆ. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಆರೋಹಿಗಳು ಭಾಗವಹಿಸಿದ್ದರು. ಅವರು ಐಸ್ ಗೋಡೆಗಳನ್ನು ಸ್ಕೇಲ್ ಹತ್ತುತ್ತಾ ಸಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ತಮ್ಮ ಲಕ್ಷಾಂತರ ಅನುಯಾಯಿಗಳನ್ನು ಪ್ರೇರೇಪಿಸುವ ಸಲುವಾಗಿ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಐಟಿಬಿಪಿ ಅಧಿಕಾರಿಗಳ ಸಾಹಸವನ್ನು ಕಂಡು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.