ಮಕ್ಕಳು ಮನೆಯಲ್ಲಿ ಇದ್ದರೆ ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದೊಡ್ಡವರು ಕೂಡ ಸ್ನ್ಯಾಕ್ಸ್ ಪ್ರಿಯರೆ. ಏನಾದರೂ ಕರಿದ ತಿನಿಸು ಮಾಡಿದಾಗ ಅದನ್ನು ನೆಂಚಿಕೊಂಡು ತಿನ್ನುಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಸೌತೆಕಾಯಿ ಚಟ್ನಿ ಮಾಡುವ ವಿಧಾನ ಇದೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ತುರಿದ ಸೌತೆಕಾಯಿ, ¼ ಕಪ್ – ಮೊಸರು, 2 ಟೇಬಲ್ ಸ್ಪೂನ್ ಮಯೋನಿಸ್, ½ ಟೀ ಸ್ಪೂನ್ – ಬೆಳ್ಳುಳ್ಳಿ ಪೇಸ್ಟ್, ½ ಟೇಬಲ್ ಸ್ಪೂನ್ – ಪುದೀನಾ ಪೇಸ್ಟ್, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ತುರಿದ ಸೌತೆಕಾಯಿ ರಸವನ್ನು ಹಿಂಡಿ ತೆಗೆದು ಸೌತೆಕಾಯಿ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ತೆಗದುಕೊಂಡು ಅದಕ್ಕೆ ಮೊಸರು, ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಮಯೋನಿಸ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ಗಂಟೆಗಳ ಫ್ರಿಡ್ಜ್ ನಲ್ಲಿಟ್ಟು ನಂತರ ಸರ್ವ್ ಮಾಡಿ.