
ಹಣಕಾಸಿನ ವ್ಯವಹಾರ ಯಾವುದೇ ಸಂಬಂಧವನ್ನು ಹಾಳು ಮಾಡಬಹುದು. ಹಾಗಾಗಿ ಸ್ನೇಹಿತರ ಮಧ್ಯೆ ಹಣದ ವ್ಯವಹಾರ ಬೇಡ. ಅವಶ್ಯಕತೆ ಬಿದ್ದು ಸ್ನೇಹಿತನ ಮುಂದೆ ಕೈಚಾಚಿದ್ರೆ ಸಮಯಕ್ಕೆ ಸರಿಯಾಗಿ ಹಣವನ್ನು ಹಿಂತಿರುಗಿಸಿ. ಹಣದ ವಿಚಾರಕ್ಕೆ ಪವಿತ್ರ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ.
ವೃತ್ತಿ ಹಾಗೂ ಸ್ನೇಹವನ್ನು ಬೇರೆ ಬೇರೆಯಾಗಿಡಿ. ಒಂದೇ ವೃತ್ತಿ ಹಾಗೂ ಒಂದೇ ಕಾರ್ಯಕ್ಷೇತ್ರ ಇಬ್ಬರು ಸ್ನೇಹಿತರ ಮಧ್ಯೆ ಗಲಾಟೆಗೆ ಕಾರಣವಾಗಬಹುದು. ಇಬ್ಬರ ಮಧ್ಯೆ ಸ್ಪರ್ಧೆ ಏರ್ಪಡಲು ಕಾರಣವಾಗಬಹುದು. ಇಂಥ ಸಮಯದಲ್ಲಿ ವೈಯಕ್ತಿಕ ಹಾಗೂ ವೃತ್ತಿಯನ್ನು ಬೇರೆ ಬೇರೆ ನೋಡಲು ಪ್ರಯತ್ನಿಸಿ.
ಸಣ್ಣ-ಸಣ್ಣ ವಿಚಾರವನ್ನೂ ಸ್ನೇಹಿತರಿಗೆ ಹೇಳಿ ಮಾಡುವವರಿದ್ದಾರೆ. ಸ್ನೇಹಿತರಿಂದಲೇ ಮಾಡಿಸುವವರೂ ಇದ್ದಾರೆ. ಇಷ್ಟು ಅವಲಂಬನೆ ಸ್ನೇಹಿತರನ್ನು ಉಸಿರುಗಟ್ಟಿಸಬಹುದು. ಅವ್ರು ನಿಮ್ಮ ಬಳಿ ಏನೂ ಹೇಳದಿರಬಹುದು. ಆದ್ರೆ ಕಿರಿಕಿರಿ ಅನುಭವಿಸಲು ಶುರುಮಾಡ್ತಾರೆ. ನಿಧಾನವಾಗಿ ನಿಮ್ಮಿಂದ ದೂರವಾಗಲು ಬಯಸ್ತಾರೆ.
ಸ್ನೇಹಿತರ ಮಧ್ಯೆ ವಿಶ್ವಾಸ ಬಹಳ ಮುಖ್ಯ. ಮಸ್ತಿ ಮೂಡಿನಲ್ಲಿ ಸ್ನೇಹಿತರ ಗುಟ್ಟನ್ನು ಇನ್ನೊಬ್ಬರಿಗೆ ಎಂದೂ ಹೇಳಬೇಡಿ. ಇದು ಸ್ನೇಹಿತ ನಿಮ್ಮ ಮೇಲಿಟ್ಟಿದ್ದ ವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ. ಶಾಶ್ವತವಾಗಿ ಸ್ನೇಹಿತ ನಿಮ್ಮಿಂದ ದೂರವಾಗುವ ಸಾಧ್ಯತೆ ಹೆಚ್ಚಿರುತ್ತದೆ.