ವಿರುದ್ಧ ಲಿಂಗದ ಸ್ನೇಹಿತರನ್ನು ಹೊಂದಿದ ಮಾತ್ರಕ್ಕೆ ಆಕೆ ತನ್ನ ಲೈಂಗಿಕ ಕಾಮನೆಗಳನ್ನು ಪೂರೈಸಲು ಲಭ್ಯವಿದ್ದಾಳೆ ಎಂದು ಭಾವಿಸುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಪೋಸ್ಕೋ ನ್ಯಾಯಾಲಯವು ಹೇಳಿದೆ.
ದೂರದ ಸಂಬಂಧಿ ಕೂಡ ಆಗಿರುವ 13 ವರ್ಷದ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 20 ವರ್ಷದ ಯುವಕನಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಕೃತ್ಯವನ್ನು ಎಸಗುವ ಮೂಲಕ ಯುವಕನು ಅಪ್ರಾಪ್ತೆಯ ಜೀವನಕ್ಕೆ ಹಾನಿ ಉಂಟು ಮಾಡಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ಜೀವನವನ್ನು ಆರೋಪಿಯು ನಾಶ ಮಾಡಿದ್ದಾನೆ ಎಂದು ಕೋರ್ಟ್ ಹೇಳಿದೆ.
ವಿಶೇಷ ನ್ಯಾಯಾಧೀಶರಾದ ಪ್ರೀತಿ ಕುಮಾರ್ ಘುಲೆ ಅವರು ಆರೋಪಿಗೆ ಕೋರ್ಟ್ ನೀಡಿರುವ ಶಿಕ್ಷೆಯು ಇಂದಿನ ಯುವಜನತೆಗೆ ಎಚ್ಚರಿಕೆಯ ಸಂದೇಶವನ್ನು ಸಾರಿದೆ. ಕಾಮದ ಬಗ್ಗೆ ಅವರಿಗಿರುವ ಅತಿಯಾದ ಬಯಕೆಯಿಂದಾಗಿ ತಮ್ಮ ಭವಿಷ್ಯವನ್ನು ಹೇಗೆ ಹಾಳುಮಾಡಿಕೊಳ್ಳಬಹುದು ಎಂಬುದಕ್ಕೆ ಈ ಪ್ರಕರಣ ನಿರ್ದಶನವಾಗಿದೆ ಎಂದು ಹೇಳಿದ್ದಾರೆ.
ಆರೋಪಿಯು ತಾನೆಂತಹ ಕೃತ್ಯ ಎಸಗಿದ್ದೇನೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾನೆ. ಹೀಗಾಗಿ ಅವನಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವ ಅವಶ್ಯಕತೆ ಇಲ್ಲ. ಅಪ್ರಾಪ್ತೆಯು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಯಲ್ಲಿ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದೆ.