ಹೆಣ್ಣಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಮಗಳಾಗಿ, ಹೆಂಡತಿಯಾಗಿ, ಅಮ್ಮನಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾಳೆ ಮಹಿಳೆ.
ಆದ್ರೆ ಪತ್ನಿಯಾಗುವುದಕ್ಕಿಂತ ಮೊದಲು ಕೆಲವೊಬ್ಬರು ಗೆಳತಿಯ ಜವಾಬ್ದಾರಿಯನ್ನೂ ನಿಭಾಯಿಸಿರುತ್ತಾರೆ. ಗೆಳೆಯನನ್ನೇ ಮದುವೆಯಾಗಲು ಬಯಸುವ ಗೆಳತಿಯರು ತಮ್ಮಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ. ಇಲ್ಲವಾದ್ರೆ ಸಂಸಾರ ಏರುಪೇರಾಗುವುದು ನಿಶ್ಚಿತ.
ಮದುವೆಗಿಂತ ಮೊದಲು ಗರ್ಲ್ ಫ್ರೆಂಡ್ ಆಗಿದ್ದವಳು ಮದುವೆಯಾದ ನಂತರ ಪತ್ನಿಯಾಗ್ತಾಳೆ. ಆಗ ಪತ್ನಿಯ ಜವಾಬ್ದಾರಿ ಹೊರಬೇಕಾಗುತ್ತದೆ. ಜೊತೆಗೆ ಕೆಲವು ವಿಷಯದ ಬಗ್ಗೆ ಜಾಗೃತಿ ವಹಿಸುವುದೂ ಮುಖ್ಯವಾಗುತ್ತದೆ.
ನಿಮಗೆ ಮದುವೆಯಾಗಿದೆ. ಹಾಗಂತ ಎಲ್ಲ ಸಮಯ ಪತಿ ನಿಮ್ಮ ಜೊತೆಗೆ ಇರಬೇಕೆನ್ನುವುದೇನೂ ಇಲ್ಲ. ಎಲ್ಲವನ್ನೂ ಹೇಳಬೇಕು, ಎಲ್ಲ ಸಮಯವನ್ನು ನನಗೆ ನೀಡಬೇಕೆಂದು ಮನಸ್ಸು ಬಯಸುತ್ತಿರುತ್ತದೆ. ಆದ್ರೆ ಖಾಸಗಿ ಜೀವನ ಎನ್ನುವುದೊಂದಿದೆ. ನೆನಪಿರಲಿ. ಹಾಗಾಗಿ ನಿಮ್ಮ ಪತಿಗೆ ಕೆಲ ಸಮಯವನ್ನು ನೀಡಿ.
ಅಮ್ಮನಂತೆ, ಟೀಚರಂತೆ ಕೆಲಸ ಮಾಡಬೇಡಿ. ಅದನ್ಯಾಕೆ ಅಲ್ಲಿ ಎಸೆದೆ? ಇದನ್ನು ಯಾಕೆ ಇಲ್ಲಿಟ್ಟಿದ್ದೀಯಾ? ಅದು ಸರಿ ಇಲ್ಲ, ಇದು ಸರಿ ಇಲ್ಲ. ಹೀಗೆ ಅಮ್ಮ, ಟೀಚರಂತೆ ರೂಲ್ಸ್ ಮಾಡಲು ಹೋಗಬೇಡಿ.
ಫಿಲ್ಮ್ ನಂತೆ ನಿಮ್ಮ ಜೀವನವಲ್ಲ. ಮದುವೆಯಾಯ್ತು. ಇನ್ನೇನು ಚಿಂತೆಯಿಲ್ಲ ಎಂದುಕೊಳ್ಳಬೇಡಿ. ಮದುವೆ ಖುಷಿಯ ಜೊತೆಗೆ ಕೆಲವೊಂದು ಜವಾಬ್ದಾರಿ, ಸಮಸ್ಯೆ ಎಲ್ಲವನ್ನೂ ನೀಡುತ್ತದೆ. ಅದೆಲ್ಲವನ್ನು ಸಂಭಾಳಿಸಲು ಮಾನಸಿಕವಾಗಿ ಶಕ್ತರಾಗಿ.
ಸಿಟ್ಟು ಬಂದರೆ, ನೋವಾದ್ರೆ, ದುಃಖವಾದ್ರೆ ತಕ್ಷಣ ವ್ಯಕ್ತಪಡಿಸಿ. ಅದನ್ನು ಯಾವುದೇ ಕಾರಣಕ್ಕೂ ಅದುಮಿಡಬೇಡಿ. ಹಾಗೆ ಮಾಡಿದ್ರೆ ಒಮ್ಮೆಲೆ ಬೇರೆ ರೀತಿಯಲ್ಲಿ ಅದು ಹೊರಬಂದು ಸಂಬಂಧ ಹಾಳು ಮಾಡಬಹುದು.