![](https://kannadadunia.com/wp-content/uploads/2023/01/98fac59c-0d54-407a-ab60-633075601707.png)
ಮಗುವಿನ ಜನನದ ಸಮಯದಲ್ಲಿ ದೇಹದ ಮೇಲೆ ಕೆಲವು ಕೂದಲು ಇರುತ್ತದೆ. ಮಗು ಬೆಳವಣಿಗೆ ಹೊಂದುತ್ತಿದ್ದಂತೆ ಕೂದಲು ದಟ್ಟವಾಗಲು ಪ್ರಾರಂಭವಾಗುತ್ತದೆ. ಮಗುವಿನ ಚರ್ಮ ಮೃದುವಾಗಿ, ತೇವಾಂಶದಿಂದ ಕೂಡಿರಬೇಕೆಂದ್ರೆ ಕಡಲೆ ಹಿಟ್ಟು, ಅರಿಶಿನ, ಬಾದಾಮಿ ತೈಲ ಮತ್ತು ಸ್ವಲ್ಪ ನೀರನ್ನು ಹಾಕಿ ಚಿಕ್ಕ ಉಂಡೆಗಳನ್ನು ತಯಾರಿಸಿ. ಅದನ್ನು ಮಗುವಿನ ದೇಹದ ಮೇಲೆ ರಬ್ ಮಾಡಿ, ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಕಡಲೆ ಹಿಟ್ಟಿಗೆ ಹಾಲಿನ ಕೆನೆ, ಜೇನುತುಪ್ಪ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮಗುವಿನ ದೇಹದ ಮೇಲೆ ನಿಧಾನವಾಗಿ ಹಚ್ಚಿ. ನಂತರ ಬೆಚ್ಚಗಿನ ನೀರಿನಿಂದ ಶಿಶುವಿನ ದೇಹವನ್ನು ಒರೆಸಿ.
ಮಗುವಿನ ದೇಹವನ್ನು ನೈಸರ್ಗಿಕ ರೀತಿಯಲ್ಲಿ ಆರೋಗ್ಯವಾಗಿಡಲು ಇದು ಅತ್ಯುತ್ತಮ ಉಪಾಯ. ಎರಡು ಚಮಚ ಗೋಧಿ ಹಿಟ್ಟಿಗೆ ಅರಿಶಿನ ಮತ್ತು 4-5 ಚಮಚ ತುಪ್ಪ ಬೆರೆಸಿ ಶಿಶುವಿನ ಮೈಗೆ ಹಚ್ಚಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮಗುವಿನ ಆರೈಕೆ ಹೀಗಿರಲಿ :
ಯಾವಾಗಲೂ ನಿಧಾನವಾಗಿ ಮಸಾಜ್ ಮಾಡಿ.
ಶಿಶುವಿಗೆ ಅಲರ್ಜಿ ಇಲ್ಲದಿರುವ ವಸ್ತುಗಳನ್ನು ಮಾತ್ರ ಬಳಸಿ
ಮೊದಲು ಶಿಶುವಿನ ಕೈ-ಕಾಲುಗಳಿಗೆ ನಂತರ ದೇಹದ ಉಳಿದ ಭಾಗಗಳಿಗೆ ಮಸಾಜ್ ಮಾಡಿ
ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಎಚ್ಚರಿಕೆಯಿಂದ ಮಾಡಿ. ಶೀತ ಆಗದಂತೆ ನೋಡಿಕೊಳ್ಳಿ.