ನಿಮ್ಮ ತ್ವಚೆಯ ಸೌಂದರ್ಯ ಕಾಪಾಡುವಲ್ಲಿ ಸ್ನಾನದ ಪಾತ್ರವೂ ದೊಡ್ಡದಿದೆ. ಅಂದರೆ ಸ್ನಾನ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳಿಂದಾಗಿ ನಿಮ್ಮ ತ್ವಚೆ ಹಾಳಾಗಬಹುದು. ಹಾಗಾದರೆ ಯಾವುವವು?
ಮನೆಯಲ್ಲೇ ಇದ್ದರೆ ದಿನಕ್ಕೊಮ್ಮೆ, ಹೊರಗೆ ಹೋಗಿ ಬೆವರಿ ಬಂದಾಗ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಒಳ್ಳೆಯ ವಿಷಯವೇ. ಆದರೆ ಸ್ನಾನದ ಅವಧಿ ಹೆಚ್ಚುವುದು ಬೇಡ. ಹದಿನೈದು ನಿಮಿಷದೊಳಗೆ ಸ್ನಾನ ಮುಗಿಯುವಂತೆ ನೋಡಿಕೊಳ್ಳಿ.
ಚಳಿಯಾಗುತ್ತದೆಂದು ಹೆಚ್ಚು ಹೆಚ್ಚು ಬಿಸಿ ನೀರು ಹೊಯ್ದುಕೊಂಡರೆ ನಿಮ್ಮ ತ್ವಚೆ ಒಣಗಬಹುದು. ಹಾಗಾಗಿ ಚಳಿ ಇರಲಿ, ಬಿಸಿ ಇರಲಿ. ಮಧ್ಯಮ ಬಿಸಿಯನ್ನು ಅನುಸರಿಸಿ.
ಸೆಕೆಗೆ ಶವರ್ ಸ್ನಾನ ಆರಾಮದಾಯಕ ಎನಿಸಬಹುದು. ಆದರೆ ಇದು ದೇಹದ ಎಲ್ಲಾ ಭಾಗಗಳಿಗೂ ನೀರು ಬೀಳುವಂತೆ ಮಾಡುವುದಿಲ್ಲ. ನೀವು ಕುತ್ತಿಗೆಯ ಹಿಂಭಾಗ, ಕಂಕುಳು ಹಾಗೂ ದೇಹದ ಇತರ ಭಾಗಗಳನ್ನು ತಿಕ್ಕಲು ಬಳಸುವ ಬ್ರಶ್ ಮೃದುವಾಗಿರಲಿ. ಹೆಚ್ಚು ಉಚ್ಚುವುದರಿಂದ ದೇಹದ ಭಾಗಗಳಲ್ಲಿ ಕೆಂಪು ಗೆರೆ ಬಿದ್ದು ಇಲ್ಲಿ ಕೆಟ್ಟ ಬ್ಯಾಕ್ಟೀರಿಯಾ ಸಂಗ್ರಹವಾಗಿ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.