ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಋತುವಿಗೆ ತಕ್ಕಂತೆ ಹುಡುಗಿಯರು ಬಿಸಿ ಹಾಗೂ ತಣ್ಣನೆಯ ನೀರನ್ನು ಸ್ನಾನಕ್ಕೆ ಬಳಸುತ್ತಾರೆ. ಆದ್ರೆ ಹಾಗೆ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ತುಂಬಾ ಸಮಯ ಸ್ನಾನ ಮಾಡುವುದು ಕೂಡ ಒಳ್ಳೆಯದಲ್ಲ. ಇದರಿಂದಾಗಿ ಚರ್ಮದಲ್ಲಿರುವ ತೇವಾಂಶ ಕಡಿಮೆಯಾಗಲು ಶುರುವಾಗುತ್ತದೆ. ಇದರಿಂದಾಗಿ ಚರ್ಮ ಒಣಗಿ ತೇವಾಂಶ ಕಳೆದುಕೊಳ್ಳುತ್ತದೆ.
ಸಾಮಾನ್ಯವಾಗಿ ಹುಡುಗಿಯರು ಸೋಪ್ ಬದಲು ಸ್ಕ್ರಬ್ ಬಳಸ್ತಾರೆ. ಅದನ್ನು ಬಾತ್ ರೂಂನಲ್ಲಿಯೇ ಬಿಟ್ಟುಬಿಡ್ತಾರೆ. ಇದರಿಂದಾಗಿ ಅದಕ್ಕೆ ಬ್ಯಾಕ್ಟೀರಿಯಾ ತಗುಲಿ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.
ಬೆಳ್ಳಗಾಗಲು ಬಯಸುವ ಹುಡುಗಿಯರು ಚರ್ಮವನ್ನು ಗಟ್ಟಿಯಾಗಿ ಉಜ್ಜುತ್ತಾರೆ. ಹೀಗೆ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗುವುದಲ್ಲದೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ.
ದಟ್ಟವಾದ, ಉದ್ದವಾದ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ. ಹಾಗಂತ ಪ್ರತಿದಿನ ಶಾಂಪೂ ಹಾಕುವುದು ಒಳ್ಳೆಯದಲ್ಲ. ಇದ್ರಿಂದ ಕೂದಲು ಒಣಗಿ ಬೆಳ್ಳಗಾಗಲು ಶುರುವಾಗುತ್ತದೆ. ಹಾಗೆ ವ್ಯಾಯಾಮ ಮಾಡಿದ ತಕ್ಷಣ ಸ್ನಾನ ಮಾಡಬಾರದು.