ಅಂತರ್ಜಾಲದಲ್ಲಿ ವಿಲಕ್ಷಣವಾದ ಮತ್ತು ಮನಸ್ಸಿಗೆ ಮುದ ನೀಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಕಿಕ್ಕಿರಿದ ಸ್ಥಳೀಯ ರೈಲಿನಲ್ಲಿ ಕುದುರೆಯೊಂದು ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಶ್ಚಿಮ ಬಂಗಾಳ ಈ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಸೀಲ್ಡಾ-ಡೈಮಂಡ್ ಹಾರ್ಬರ್ ಡೌನ್ ಸ್ಥಳೀಯ ರೈಲಿನಲ್ಲಿ ಕುದುರೆ ತನ್ನ ಮಾಲೀಕರ ಜೊತೆ ಪ್ರಯಾಣಿಸಿದೆ.
ಪಶ್ಚಿಮ ಬಂಗಾಳದ ಸ್ಥಳೀಯ ರೈಲುಗಳಲ್ಲಿ ಸಾಮಾನ್ಯವಾಗಿ ಸಣ್ಣ ಜಾನುವಾರುಗಳು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಆದರೆ, ಇಷ್ಟು ದೊಡ್ಡ ಕುದುರೆ ಪ್ರಯಾಣಿಸಿರುವುದು ಬಹಳ ಅಪರೂಪದ ದೃಶ್ಯವಾಗಿದೆ. ಇದರ ಕೆಲವು ಚಿತ್ರಗಳು ಕೂಡ ಆನ್ಲೈನ್ನಲ್ಲಿ ಕಾಣಿಸಿಕೊಂಡಿವೆ. ಅದರ ಮಾಲೀಕರೊಂದಿಗೆ ಲೋಕಲ್ ರೈಲಿನಲ್ಲಿ ಜನಸಂದಣಿಯ ನಡುವೆ ಕುದುರೆ ನಿಂತಿದ್ದು, ಬಹುಶಃ ಅದು ಪ್ರಯಾಣವನ್ನು ಆನಂದಿಸಿರಬಹುದು. ವರದಿಗಳ ಪ್ರಕಾರ, ವೈರಲ್ ಚಿತ್ರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೂರ್ವ ರೈಲ್ವೆ ತನಿಖೆಗೆ ಆದೇಶಿಸಿದೆ ಎಂದು ತಿಳಿದು ಬಂದಿದೆ.
https://youtu.be/Ohm8wCB7MRY