alex Certify ‘ಸ್ತ್ರೀ- ಪುರುಷ’ ಒಂದಾಗಿರಲು ಕಾರಣ ಏನು ಗೊತ್ತಾ..…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ತ್ರೀ- ಪುರುಷ’ ಒಂದಾಗಿರಲು ಕಾರಣ ಏನು ಗೊತ್ತಾ..…?

ಸ್ತ್ರೀ ಹಾಗೂ ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಂಡಿ ಸಾಗಲು ಇವರಿಬ್ಬರು ಒಂದಾಗಬೇಕು. ಒಂದು ಚಕ್ರ ಕಳಚಿದರೂ ಜೀವನದ ದಾರಿ ಸುಲಭವಾಗಿ ಸಾಗುವುದಿಲ್ಲ.

ಪುರುಷನೊಬ್ಬನಿಗೆ ಮಹಿಳೆಯ ಅವಶ್ಯಕತೆ ಎಷ್ಟಿದೆಯೋ ಹಾಗೆ ಮಹಿಳೆಗೆ ಕೂಡ ಪುರುಷನ ನೆರಳು ಬೇಕು. ಅವರು ಎಷ್ಟು ಸ್ವಾವಲಂಬಿಗಳಾಗಿರಲಿ ಒಂದಾನೊಂದು ಸಮಯದಲ್ಲಿ ಮಹಿಳೆಗೆ ಪುರುಷ ಅಥವಾ ಪುರುಷನಿಗೆ ಮಹಿಳೆಯ ಸಾನಿಧ್ಯ ಬೇಕು ಎನ್ನಿಸುತ್ತದೆ.

ಒಬ್ಬರನ್ನು ಬಿಟ್ಟು ಒಬ್ಬರು ಬದುಕಲು ಸಾಧ್ಯವಿಲ್ಲ. ಆದ್ರೆ ಪುರುಷನಿಗೆ ಮಹಿಳೆ ಹಾಗೂ ಮಹಿಳೆಗೆ ಪುರುಷನ ಅವಶ್ಯಕತೆ ಏಕಿದೆ ಎನ್ನುವ ಬಗ್ಗೆ ಎಂದಾದರೂ ಚಿಂತಿಸಿದ್ದೀರಾ? ಪುರುಷ ಅಥವಾ ಮಹಿಳೆ ಸಂಗಾತಿಯನ್ನು ಬಯಸಲು ಕೆಲವೊಂದು ಕಾರಣಗಳಿವೆ.

ಪುರುಷ ಹಾಗೂ ಮಹಿಳೆ ಒಂದಾಗಿರಲು ಭದ್ರತೆ ಬಹು ಮುಖ್ಯ ಕಾರಣಗಳಲ್ಲಿ ಒಂದು. ಪುರುಷ ಹಾಗೂ ಮಹಿಳೆಯ ಭದ್ರತಾ ದೃಷ್ಠಿಕೋನ ಬೇರೆ ಬೇರೆಯಾಗಿರುತ್ತದೆ. ಆದ್ರೆ ಇಬ್ಬರೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹತ್ತಿರವಾಗ್ತಾರೆ.

ಶಾರೀರಿಕ ತೃಪ್ತಿ ಹಾಗೂ ಕುಟುಂಬ ಬೆಳೆಸುವ ಕಾರಣಕ್ಕೆ ಪುರುಷ-ಮಹಿಳೆ ಪರಸ್ಪರ ಅವಲಂಬಿಸಿರುತ್ತಾರೆ.

ಭಾವನಾತ್ಮಕ ಬೆಂಬಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮಾತುಗಳನ್ನು ಕೇಳುವ ಹಾಗೂ ಅದಕ್ಕೆ ಮಹತ್ವ ನೀಡುವ ಇನ್ನೊಬ್ಬ ವ್ಯಕ್ತಿಯ ಆಸರೆ ಬೇಕೆನಿಸುತ್ತದೆ. ಇದಕ್ಕಾಗಿ ಅವರು ಸಂಗಾತಿಯ ಹುಡುಕಾಟ ನಡೆಸುತ್ತಾರೆ.

ಸ್ತ್ರೀ ಹಾಗೂ ಪುರುಷ ಇಬ್ಬರಿಗೂ ಸಲಹೆ ನೀಡುವ ವ್ಯಕ್ತಿಯೊಬ್ಬರ ಅವಶ್ಯಕತೆ ಇರುತ್ತದೆ. ಹಾಗಾಗಿ ಅವರಿಗೆ ಸಂಗಾತಿಯ ಅಗತ್ಯ ಕಾಡುತ್ತದೆ. ಮಹಿಳೆ ಹಾಗೂ ಪುರುಷರ ಆಲೋಚನೆಗಳು ಬೇರೆಯಾಗಿದ್ದು, ಇಬ್ಬರು ಒಂದಾಗಿದ್ದರೆ ಅವರ ವ್ಯಾಪ್ತಿ ವಿಸ್ತರಣೆಗೊಳ್ಳುತ್ತದೆ.

ಮಹಿಳೆಯರ ಕೆಲವೊಂದು ಗುಣ ಪುರುಷರಲ್ಲಿರುವುದಿಲ್ಲ. ಹಾಗೆ ಪುರುಷರ ಕೆಲವೊಂದು ಗುಣ ಮಹಿಳೆಯರಲ್ಲಿರುವುದಿಲ್ಲ. ಇವರಿಬ್ಬರು ಒಂದಾದರೆ ಜೀವನ ಪರಿಪೂರ್ಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...