ಮೊದಲ ಬಾರಿಗೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವಾಗ ಮಹಿಳೆಯರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ವೈದ್ಯರು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಪ್ರಶ್ನೆಗಳನ್ನು ಕೇಳಬಹುದು ಅನ್ನೋ ಗೊಂದಲ ಅವರಲ್ಲಿರುತ್ತದೆ. ವೈದ್ಯರೊಂದಿಗೆ ಮುಕ್ತವಾಗಿ ರೋಗಿಗಳು ಮಾತನಾಡುವುದೇ ಇಲ್ಲ. ಈ ಹಿಂಜರಿಕೆಯಿಂದಾಗಿ ಕೆಲವೊಮ್ಮೆ ಸ್ತ್ರೀರೋಗ ತಜ್ಞರಿಗೆ ಸಮಸ್ಯೆಯ ಮೂಲವನ್ನು ತಲುಪಲು ಕಷ್ಟವಾಗುತ್ತದೆ. ಸಂತಾನೋತ್ಪತ್ತಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಹಿಡಿದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರು ಸಹಾಯ ಮಾಡುತ್ತಾರೆ. ಆದ್ದರಿಂದ ಸ್ತ್ರೀರೋಗ ತಜ್ಞರನ್ನು ಮೊದಲ ಬಾರಿಗೆ ಭೇಟಿ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಒತ್ತಡಕ್ಕೆ ಒಳಗಾಗಬೇಡಿ – ಮೊದಲ ಬಾರಿಗೆ ಸ್ತ್ರೀರೋಗ ತಜ್ಞರ ಬಳಿಗೆ ಹೋಗುವ ಮೊದಲು ಗುಪ್ತಾಂಗಗಳ ಹೇರ್ ಟೆನ್ಷನ್ ನಿಮಗೆ ತೊಂದರೆ ನೀಡಬಹುದು. ಅವುಗಳನ್ನು ಸ್ವಚ್ಛಗೊಳಿಸಲು ಮರೆತಿದ್ದರೆ ಅನಗತ್ಯ ಟೆನ್ಶನ್ ತೆಗೆದುಕೊಳ್ಳುವುದು ನಿಶ್ಚಿತ. ಆದರೆ ಇದಕ್ಕಾಗಿ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಸ್ತ್ರೀರೋಗತಜ್ಞರು ನಿಮ್ಮ ರೋಗದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಹಾಗಂತ ವೈಯಕ್ತಿಕ ನೈರ್ಮಲ್ಯವನ್ನೂ ಕಾಪಾಡಿಕೊಳ್ಳಲೇಬೇಕು. ಮಹಿಳೆಯರು ತಮ್ಮ ಪ್ಯುಬಿಕ್ ಹೇರ್ ಸ್ವಚ್ಛಗೊಳಿಸಿಕೊಳ್ಳುವುದು ಉತ್ತಮ. ಆದರೆ ಈ ಬಗ್ಗೆ ಚಿಂತಿಸಬೇಡಿ, ಏಕೆಂದರೆ ಇದು ವೈದ್ಯರಿಗೆ ಸಾಮಾನ್ಯ ವಿಷಯವಾಗಿದೆ.
ಮಾತನಾಡುವಾಗ ಸ್ಪಷ್ಟವಾಗಿರಬೇಕು– ವೈದ್ಯರೊಂದಿಗೆ ಮಾತನಾಡುವಾಗ ನಿಮ್ಮ ಸಮಸ್ಯೆಗಳ ಬಗ್ಗೆ ಯಾವಾಗಲೂ ಸ್ಪಷ್ಟವಾಗಿರಿ. ವೈದ್ಯರಿಂದ ಏನನ್ನೂ ಮರೆಮಾಚಬೇಡಿ. ಬದಲಿಗೆ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರಿ.
ಮುಟ್ಟಿನ ಮಾಹಿತಿ- ನಿಮ್ಮ ಋತುಚಕ್ರದ ಮಾಹಿತಿಯನ್ನು ಖಚಿತವಾಗಿ ನೀಡಿದರೆ ನಿಮ್ಮ ಸಮಸ್ಯೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸುಲಭವಾಗುತ್ತದೆ. ಈ ಕಾರ್ಯವನ್ನು ಸುಲಭಗೊಳಿಸಲು ಅವಧಿ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದು. ಮುಟ್ಟಿನ ದಿನಾಂಕ ಸೇರಿದಂತೆ ಎಲ್ಲಾ ವಿವರಗಳನ್ನು ವೈದ್ಯರೊಂದಿಗೆ ಹಂಚಿಕೊಳ್ಳಿ.