alex Certify ʼಸ್ಟ್ರೆಚ್ ಮಾರ್ಕ್ʼ ಗಳಿಗೆ ಇಲ್ಲಿದೆ ನೋಡಿ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಟ್ರೆಚ್ ಮಾರ್ಕ್ʼ ಗಳಿಗೆ ಇಲ್ಲಿದೆ ನೋಡಿ ಮನೆ ಮದ್ದು

ಗರ್ಭಧಾರಣೆಯ ನಂತರ ಸ್ಟ್ರೆಚ್ ಮಾರ್ಕಿನ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ. ಇದು ಮುಜುಗರವನ್ನು ಕೂಡ ಉಂಟುಮಾಡುತ್ತದೆ. ಕೇವಲ ಹೆಂಗಸರಿಗಷ್ಟೇ ಅಲ್ಲ ಪುರುಷರಿಗೂ ಈ ಸಮಸ್ಯೆ ಕಾಡುತ್ತದೆ. ಚರ್ಮದ ಗಾತ್ರದಲ್ಲಿನ ವ್ಯತ್ಯಾಸದಿಂದ ಇದು ಉಂಟಾಗುತ್ತದೆ .

ಚರ್ಮ ಹಿಗ್ಗುವಿಕೆ ಹಾಗೂ ಕುಗ್ಗುವಿಕೆಯಿಂದ ಈ ಸ್ಟ್ರೆಚ್ ಮಾರ್ಕ್ ಗಳು ಬೀಳುತ್ತದೆ. ಕೆಲವರಿಗೆ ಬಿಳಿ ಬಣ್ಣದ ಮಾರ್ಕ್ ಗಳು ಇದ್ದರೆ ಇನ್ನು ಕೆಲವರಿಗೆ ಕೆಂಪು ಬಣ್ಣದ್ದು ಮೂಡುತ್ತದೆ.

ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿ ಈ ಸ್ಟ್ರೆಚ್ ಮಾರ್ಕ್ ಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.

*ವಿಟಮಿನ್ ಎ ಹೇರಳವಾಗಿರುವ ವಸ್ತುಗಳನ್ನು ಸೇವಿಸುವುದರಿಂದ ಇದರಿಂದ ಮುಕ್ತಿ ಪಡೆಯಬಹುದು. ಕ್ಯಾರೆಟ್ ಹಾಗೂ ಗೆಣಸಿನಲ್ಲಿ ಇದು ಹೆಚ್ಚಿರುತ್ತದೆ. ಈ ವಸ್ತುವನ್ನು ನಿಮ್ಮ ಡೆಯೆಟ್ ನಲ್ಲಿ ಸೇರಿಸಿಕೊಳ್ಳಿ. ಇದರಿಂದ ಸ್ಟ್ರೇಚ್ ಮಾರ್ಕ್ ನಿವಾರಿಸಿಕೊಳ್ಳಬಹುದು.

*ಒಂದು ಕಪ್ ಸಕ್ಕರೆಗೆ ¼ ಕಪ್ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ನಂತರ ಇದನ್ನು ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ಸ್ಟ್ರೆಚ್ ಮಾರ್ಕ್ ಇರುತ್ತದೆಯೋ ಅಲ್ಲಿ ನಿಧಾನಕ್ಕೆ ಮಸಾಜ್ ಮಾಡಿ. ಇದನ್ನು ಸತತವಾಗಿ ಮಾಡುವುದರಿಂದ ಕಲೆಗಳು ವಾಸಿಯಾಗುತ್ತದೆ.

*ವಿಟಮಿನ್ ಇ ಆಯಿಲ್ ಅನ್ನು ಕಲೆಗಳಿರುವ ಜಾಗಕ್ಕೆ ಹೆಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ಕಲೆ ನಿವಾರಣೆಯಾಗುತ್ತದೆ.

*ಅಲೋವೆರಾ ಜೆಲ್ ಕೂಡ ಇದನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಅಲೋವೆರಾ ಗಿಡವಿದ್ದರೆ ಅದರ ಲೋಳೆ ತೆಗೆದುಕೊಂಡು ಸ್ಟ್ರೆಚ್ ಮಾರ್ಕ್ ಇರುವ ಕಡೆ ಮಸಾಜ್ ಮಾಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...