ಬೇಕಾಗುವ ಸಾಮಾಗ್ರಿಗಳು:
ಮೈದಾ – 2 ಕಪ್, ಓಂಕಾಳು – ಸ್ವಲ್ಪ, ಎಣ್ಣೆ – 4 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ – 1 ಟೀ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಸೋಂಪು – 1 ಟೀ ಸ್ಪೂನ್, ಈರುಳ್ಳಿ – 1, ಹಸಿಮೆಣಸಿನಕಾಯಿ – 2, ಶುಂಠಿ – ಬೆಳ್ಳುಳ್ಳಿ ಪೇಸ್ಟ್- ಟೀ ಸ್ಪೂನ್, ಕಡಲೇಹಿಟ್ಟು – ಎರಡು ಟೀ ಸ್ಪೂನ್, ಅಚ್ಚಖಾರದ ಪುಡಿ, ಗರಂ ಮಸಾಲಾ – ಅರ್ಧ ಟೀ ಸ್ಪೂನ್, ಕಾಳುಮೆಣಸಿನ ಪುಡಿ – ಅರ್ಧ ಟೀ ಸ್ಪೂನ್, ಅರಶಿನ ಪುಡಿ – ಕಾಲು ಟೀ ಸ್ಪೂನ್, ಆಮ್ಚೂರ್ ಪೌಡರ್ – ಅರ್ಧ ಟೀ ಸ್ಪೂನ್, ಚಿಟಿಕೆ ಇಂಗು, ಆಲೂಗಡ್ಡೆ – 2, ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ:
ಮೊದಲಿಗೆ 2 ಕಪ್ ಮೈದಾವನ್ನು ಒಂದು ಬೌಲ್ ಗೆ ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಓಂಕಾಳು ಹಾಕಿ ಡ್ರೈ ಮಿಕ್ಸ್ ಮಾಡಿ. 4 ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ಪಲ್ಪ ಸ್ಪಲ್ಪ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಚಪಾತಿ ಹಿಟ್ಟಿಗಿಂತ ಸ್ಪಲ್ಪ ತೆಳುವಾಗಿರಲಿ. ಬಳಿಕ ಇದಕ್ಕೆ ಮುಚ್ಚಳ ಮುಚ್ಚಿ 20 ನಿಮಿಷ ಹಾಗೆ ಇಡಿ. ಬಳಿಕ 1 ಟೀ ಸ್ಪೂನ್ ಧನಿಯಾ, 1 ಟೀ ಸ್ಪೂನ್ ಜೀರಿಗೆ, 1 ಟೀ ಸ್ಪೂನ್ ಸೋಂಪು ತೆಗೆದುಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇನ್ನು ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ 2 ಹಸಿಮೆಣಸಿನಕಾಯಿ ಸೇರಿಸಿ. ಇದು ಬೆಂದ ಬಳಿಕ ಮಾಡಿಟ್ಟ ಪುಡಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ 1 ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಸೇರಿಸಿ.
ನಂತರ ಎರಡು ಟೀ ಸ್ಪೂನ್ ಕಡಲೇಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 2 ರಿಂದ 3 ನಿಮಿಷ ಕಾಲ ಚೆನ್ನಾಗಿ ಹುರಿದ ನಂತರ ಖಾರಕ್ಕೆ ಸ್ವಲ್ಪ ಅಚ್ಚಖಾರದ ಪುಡಿ, ಅರ್ಧ ಟೀ ಸ್ಪೂನ್ ಗರಂ ಮಸಾಲಾ, ಅರ್ಧ ಟೀ ಸ್ಪೂನ್ ಕಾಳುಮೆಣಸಿನ ಪುಡಿ, ಕಾಲು ಟೀ ಸ್ಪೂನ್ ನಷ್ಟು ಅರಶಿನ ಪುಡಿ, ಅರ್ಧ ಟೀ ಸ್ಪೂನ್ ಆಮ್ಚೂರ್ ಪೌಡರ್, ಚಿಟಿಕೆ ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಬೇಯಿಸಿ, ಸ್ಮಾಶ್ ಮಾಡಿರುವ ಆಲೂಗಡ್ಡೆಯನ್ನು ಹಾಕಿ, ಜೊತೆಗೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇನ್ನು ಮೈದಾ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ. ನಂತರ ಲಟ್ಟಣಿಗೆಯಲ್ಲಿ ನಿಧಾನಕ್ಕೆ ಲಟ್ಟಿಸಿ. ನಂತರ ಆಲೂಗಡ್ಡೆ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಆಕಾರದಲ್ಲಿ ಹಿಟ್ಟಿನ ಮಧ್ಯಕ್ಕೆ ಇಟ್ಟು ಫೋಲ್ಡ್ ಮಾಡಬೇಕು. ಅಂದರೆ ಒಬ್ಬಟ್ಟು ಮಾಡುವ ರೀತಿಯಲ್ಲಿ. ಬಳಿಕ ಲಟ್ಟಣಿಗೆ ಸಹಾಯದಿಂದ ಮೃದುವಾಗಿ ಲಟ್ಟಿಸಿ. ಇನ್ನು ಸ್ಟೌನಲ್ಲಿ ಒಂದು ಬಾಣಲೆಯಿಟ್ಟು ಕರಿಯಲು ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಮಾಡಿಟ್ಟ ಕಚೋರಿಯನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಸವಿಯಲು ರುಚಿಯಾದ ಕಚೋರಿ ರೆಡಿ.