ಟಾಟಾ ಮೋಟಾರ್ಸ್ ಕಂಪನಿ 2020ರಲ್ಲಿ ಆಲ್ಟ್ರೊಜ್‌ನೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿತ್ತು. ಈಗ ಹ್ಯಾಚ್‌ಬ್ಯಾಕ್‌ನ ಎರಡು ಹೊಸ ರೂಪಾಂತರಗಳನ್ನು ತರಲು ಯೋಜಿಸುತ್ತಿದೆ.
ಟಾಟಾ ಅಲ್ಟ್ರೋಜ್ ಸಿಎನ್‌ಜಿ ಮತ್ತು ಅಲ್ಟ್ರೊಜ್ ರೇಸರ್ ಅನ್ನು ಈ ವರ್ಷ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ತಿದೆ. ಈ ಎರಡೂ ಮಾದರಿಗಳನ್ನು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ.
TATA ALTROZ CNG
ಟಾಟಾ ಆಲ್ಟ್ರೋಝ್ ಸಿಎನ್‌ಜಿ 1.2ಲೀ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಫ್ಯಾಕ್ಟರಿಯಲ್ಲಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್ ಅನ್ನು ಇದಕ್ಕೆ ಸೇರಿಸಲಾಗುತ್ತದೆ. CNG ಮೋಡ್‌ನಲ್ಲಿ, ಈ ಎಂಜಿನ್ 77PS ಗರಿಷ್ಠ ಶಕ್ತಿ ಮತ್ತು 95Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸೆಟಪ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಕುತೂಹಲಕಾರಿ ಅಂಶವೆಂದರೆ ಈ ಮಾದರಿಯು ಹೊಸ ಡ್ಯುಯಲ್ ಸಿಲಿಂಡರ್ ಸೆಟಪ್ ಅನ್ನು ಪಡೆಯುತ್ತದೆ ಮತ್ತು ಪ್ರತಿ ಸಿಲಿಂಡರ್ 30 ಲೀಟರ್ ಸಾಮರ್ಥ್ಯವನ್ನು ಹೊಂದಿರುತ್ತದೆ.
ಇದು ಏಕ ಸುಧಾರಿತ ECU (ಎಂಜಿನ್ ಕಂಟ್ರೋಲ್ ಯುನಿಟ್) ಮತ್ತು ಲೀಕೇಜ್ ಡಿಟೆಕ್ಷನ್ ಟೆಕ್ನಾಲಜಿಯೊಂದಿಗೆ ಡೈರೆಕ್ಟ್ ಸ್ಟೇಟ್ CNG ಹೊಂದಿರುವ ಮೊದಲ ಕಾರು. ವೇಗದ ಇಂಧನ ತುಂಬುವಿಕೆ, ಇಂಧನಗಳ ನಡುವೆ ಸ್ವಯಂ ಸ್ವಿಚ್ ಮತ್ತು ಮಾಡ್ಯುಲರ್ ಇಂಧನ ಫಿಲ್ಟರ್‌ನಂತಹ ವೈಶಿಷ್ಟ್ಯಗಳು ಇದರಲ್ಲಿವೆ. ಇದರ ಮೈಲೇಜ್ ಸಹ ಸುಮಾರು 26 ಕಿಮೀ ಆಗಿರಬಹುದು.
TATA ALTROZ RACER
ಟಾಟಾ ಆಲ್ಟ್ರೋಜ್ ರೇಸರ್ ಹ್ಯುಂಡೈ i20 N ಲೈನ್‌ನೊಂದಿಗೆ ಸ್ಪರ್ಧಿಸುತ್ತದೆ. ಇದು 1.0L ಟರ್ಬೊ ಪೆಟ್ರೋಲ್ ಎಂಜಿನ್ (118bhp) ಮತ್ತು 6-ಸ್ಪೀಡ್ iMT, 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. Ultroz ರೇಸರ್ 1.2L, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 5,500rpm ನಲ್ಲಿ 120PS ಪವರ್ ಮತ್ತು 1,750rpm ನಿಂದ 4,000rpm ನಡುವೆ 170Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಟರ್ಬೊ-ಪೆಟ್ರೋಲ್ ಘಟಕವು ನೆಕ್ಸಾನ್ ಸಬ್‌ಕಾಂಪ್ಯಾಕ್ಟ್ ಮಾದರಿಯ ಶ್ರೇಣಿಯಲ್ಲಿಯೂ ಲಭ್ಯವಿದೆ. ಹ್ಯಾಚ್‌ಬ್ಯಾಕ್‌ನ ರೇಸರ್ ರೂಪಾಂತರವು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಸೀಟ್‌ಗಳು, ವಾಯ್ಸ್ ಆಕ್ಟಿವೇಟೆಡ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.