alex Certify ಸ್ಟಾರ್ ನಟ ನಾಗಚೈತನ್ಯಗೆ ದಂಡ ವಿಧಿಸಿದ ಪೊಲೀಸರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ ನಟ ನಾಗಚೈತನ್ಯಗೆ ದಂಡ ವಿಧಿಸಿದ ಪೊಲೀಸರು….!

ಹೈದರಾಬಾದ್ ಪೊಲೀಸರು ಕಾರುಗಳ ಗ್ಲಾಸ್ ನಿಂದ ಕಪ್ಪು ಬಣ್ಣದ ಟಿಂಟ್ ತೆಗೆದುಹಾಕುವಂತೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಟಾಲಿವುಡ್ ನಟ ಅಲ್ಲು ಅರ್ಜುನ್ ನಂತರ, ಇದೀಗ ನಟ ನಾಗ ಚೈತನ್ಯ ಅವರ ಟೊಯೊಟಾ ವೆಲ್‌ಫೈರ್ ಎಂಪಿವಿಯ ವಿಂಡ್‌ಶೀಲ್ಡ್‌ನಲ್ಲಿರುವ ಕಪ್ಪು ಟಿಂಟ್ ಗಾಗಿ ರಾಜ್ಯ ಸಂಚಾರ ಪೊಲೀಸರು 700 ರೂ. ದಂಡ ವಿಧಿಸಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್‌ನಲ್ಲಿರುವ ಚೆಕ್ ಪೋಸ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಈ ಹಿಂದೆ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ರೇಂಜ್ ರೋವರ್‍ಗೂ ಇದೇ ಕಾರಣಕ್ಕೆ ದಂಡ ವಿಧಿಸಲಾಗಿತ್ತು. ಅದಕ್ಕೂ ಮುನ್ನ ಇದೇ ಕಾರಣಕ್ಕೆ ನಟ ಕಲ್ಯಾಣ್ ರಾಮ್ ಗೆ ಚಲನ್ ಜಾರಿ ಮಾಡಲಾಗಿತ್ತು. ದಂಡದ ಮೊತ್ತವನ್ನು ಪಾವತಿಸಿದ ನಂತರ ನಾಗ ಚೈತನ್ಯಗೆ ಸ್ಥಳದಿಂದ ತೆರಳಲು ಅವಕಾಶ ನೀಡಲಾಯಿತು.

ನಾಗ ಚೈತನ್ಯ ಅವರ ಟೊಯೊಟಾ ವೆಲ್‌ಫೈರ್ ಎಂಪಿವಿ ಕಾರು ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿದೆ. ವಿಂಡ್‌ಸ್ಕ್ರೀನ್‌ನಲ್ಲಿ ಸಂಪೂರ್ಣ ಅಪಾರದರ್ಶಕ ಕಪ್ಪು ಛಾಯೆಯಿದೆ. ಕಪ್ಪು ಟಿಂಟ್ ಭಾರತದಲ್ಲಿ ಕಾನೂನುಬಾಹಿರವಾಗಿದೆ. ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೆಲೆಬ್ರಿಟಿಗಳು ತಮ್ಮ ಕಾರುಗಳಲ್ಲಿ ಟಿಂಟ್ ಅನ್ನು ಅಳವಡಿಸಿದ್ದಾರೆ.

ಭಾರತದಲ್ಲಿ ಎಂವಿ ಕಾಯಿದೆಯಡಿಯಲ್ಲಿ ವಾಹನಗಳ ಮೇಲೆ ಬಣ್ಣದ ಕಿಟಕಿಗಳನ್ನು ಬಳಸುವುದು ಕಾನೂನುಬಾಹಿರವಾಗಿದೆ. ವಾಹನದೊಳಗೆ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಲು ನಿಯಮ ಮಾಡಲಾಗಿದೆ. ಮುಂಬೈ, ದೆಹಲಿ ಮತ್ತು ಬೆಂಗಳೂರು ಸೇರಿದಂತೆ ರಾಷ್ಟ್ರದ ಮೆಟ್ರೋಪಾಲಿಟನ್ ನಗರಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...