
ಡುಕಾಟಿ, ಆಡಿ, ಹಮ್ಮರ್ ಸೇರಿದಂತೆ ಅನೇಕ ವಾಹನಗಳು ಅವರ ಗ್ಯಾರೇಜ್ ನಲ್ಲಿವೆ. ವರದಿಗಳ ಪ್ರಕಾರ ಧೋನಿ 100 ಕ್ಕೂ ಹೆಚ್ಚು ಬೈಕ್‌ಗಳು ಮತ್ತು ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ.
ಎಂಎಸ್ ಧೋನಿ ಅವರ ಬೈಕ್ ಸಂಗ್ರಹವು ನಾರ್ಟನ್ ಜುಬಿಲಿ 250 ಅನ್ನು ಒಳಗೊಂಡಿದೆ. ಇದು ವಿಂಟೇಜ್ ಬೈಕ್‌ಗಳಲ್ಲಿ ಒಂದಾಗಿದ್ದು 250 ಸಿಸಿ ಎಂಜಿನ್‌ನಿಂದ ಚಾಲಿತವಾಗಿದೆ.
33.30 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ H2 ಕೂಡ ಧೋನಿ ಗ್ಯಾರೇಜ್ ನಲ್ಲಿದೆ. ಧೋನಿ ಜೀಪ್ ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್ ಅನ್ನು ಹೊಂದಿದ್ದಾರೆ.
MS ಧೋನಿ ಅವರು ಮಹೀಂದ್ರ ಸ್ಕಾರ್ಪಿಯೊವನ್ನು ಹೊಂದಿದ್ದಾರೆ, ಇದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ವಿಶ್ವಾಸಾರ್ಹ SUV ಗಳಲ್ಲಿ ಒಂದಾಗಿದೆ.
ಧೋನಿ ಕಾನ್ಫೆಡರೇಟ್ X132 ಹೆಲ್‌ಕ್ಯಾಟ್ ಅನ್ನು ಹೊಂದಿದ್ದು, ಈ ಮೂಲಕ ಆಗ್ನೇಯ ಏಷ್ಯಾ ರಾಷ್ಟ್ರದ ಏಕೈಕ ಮಾಲೀಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಈ ಬೈಕ್ ಬ್ರಾಡ್ ಪಿಟ್, ಟಾಮ್ ಕ್ರೂಸ್, ಡೇವಿಡ್ ಬೆಕ್‌ಹ್ಯಾಮ್ ಮತ್ತು ರಿಯಾನ್ ರೆನಾಲ್ಡ್ಸ್ ಅವರಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳ ಒಡೆತನದಲ್ಲಿದೆ.
ವಿಕೆಟ್-ಕೀಪರ್ ಧೋನಿ ಬ್ಯಾಟರ್ ರೋಲ್ಸ್ ರಾಯ್ಸ್ ಸಿವರ್ ವ್ರೈತ್ II 1980 ರ ಆವೃತ್ತಿಯನ್ನು ಸಹ ಹೊಂದಿದ್ದಾರೆ, ಇದು ಅವರು ಇತ್ತೀಚೆಗೆ ಖರೀದಿಸಿದ ಸುಂದರವಾದ ನೀಲಿ ಕಾರು. ಜುಲೈ 7 ರಂದು ತಮ್ಮ 42 ನೇ ಹುಟ್ಟುಹಬ್ಬ ಆಚರಿಸಿಕೊಂಡ ಎಂ ಎಸ್ ಡಿ ಅವರಿಗೆ ಶುಭಾಶಯಗಹಳ ಮಹಾಪೂರವೇ ಹರಿದುಬಂದಿದೆ.








