ವಿಶ್ವದ ಅತಿದೊಡ್ಡ ರುದ್ರ ವೀಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಭೋಪಾಲ್ ಕಲಾವಿದರು ಬೇಡದ ವಸ್ತುಗಳಿಂದ್ಲೇ ಈ ಸುಂದರ ಸಂಗೀತ ಸಾಧನವನ್ನು ನಿರ್ಮಿಸಿರೋದು ವಿಶೇಷ.
ಜಂಕ್‌ನಿಂದ್ಲೇ ವೀಣೆಯನ್ನು ತಯಾರಿಸಿ ವಿಶ್ವ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಈ ಸುಂದರ ರುದ್ರ ವೀಣೆಯ ಉದ್ದ 28 ಅಡಿ, ಎತ್ತರ 12 ಅಡಿ ಇದ್ದರೆ, 10 ಅಡಿ ಅಗಲವಿದೆ. ಈ ವೀಣೆಯ ತೂಕ ಬರೋಬ್ಬರಿ 5 ಟನ್.
ಇದನ್ನು ತಯಾರಿಸಲು 10 ಲಕ್ಷ ರೂಪಾಯಿ ಖರ್ಚಾಗಿದೆಯಂತೆ. ವೀಣೆ ತಯಾರಿಸಲು ಕಲಾವಿದರು 6 ತಿಂಗಳು ಶ್ರಮಿಸಿದ್ದಾರೆ. ಚೈನ್, ಕೇಬಲ್, ಗೇರ್, ಬಾಲ್ ಬೇರಿಂಗ್ ಮುಂತಾದ ವಾಹನಗಳ ಬಿಡಿಭಾಗಗಳಿಂದ್ಲೇ ಈ ರುದ್ರವೀಣೆ ನಿರ್ಮಾಣವಾಗಿದೆ. ವೀಣೆಯಲ್ಲಿ ನಿರ್ಮಾಣದಲ್ಲಿ 15 ಕಲಾವಿದರು ಕೈಜೋಡಿಸಿದ್ದರು. ಭೋಪಾಲ್‌ನ ಅಟಲ್ ಪಥ್‌ನಲ್ಲಿ ರುದ್ರವೀಣೆಯನ್ನು ಇಡಲಾಗುವುದು.
ಕಸದಿಂದ ರಸ ಎಂಬ ಥೀಮ್ ಅಡಿಯಲ್ಲಿ ವೀಣೆಯನ್ನು ನಿರ್ಮಾಣ ಮಾಡಲಾಗಿದೆ. 15 ಕಲಾವಿದರು ಸ್ಕ್ರ್ಯಾಪ್ ಸಂಗ್ರಹಿಸಿ ವಿನ್ಯಾಸ ಮಾಡಿರೋದು ವಿಶೇಷ. ಭಾರತದ ಯುವ ಪೀಳಿಗೆಗೆ ದೇಶದ ಸಂಸ್ಕೃತಿಯ ಅರಿವು ಮೂಡಿಸುವುದು ಇವರ ಉದ್ದೇಶ.