alex Certify ಸ್ಕೂಲ್‌ ಬಸ್‌ ಗಳ ಬಣ್ಣವೇಕೆ ಹಳದಿಯಾಗಿರುತ್ತೆ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೂಲ್‌ ಬಸ್‌ ಗಳ ಬಣ್ಣವೇಕೆ ಹಳದಿಯಾಗಿರುತ್ತೆ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ನಮ್ಮ ಜೀವನದಲ್ಲಿ ಬಣ್ಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿಯೇ ನಾವು ಪ್ರತಿದಿನ ಹಲವಾರು ಬಣ್ಣಗಳನ್ನು ನೋಡುತ್ತೇವೆ. ಬಣ್ಣ ಬಣ್ಣದ ವಾಹನಗಳು ಕೂಡ ಸರ್ವೇ ಸಾಮಾನ್ಯ. ಆದರೆ ಸ್ಕೂಲ್‌ ಬಸ್‌ಗಳು ಮಾತ್ರ ಎಲ್ಲೆಡೆ ಕೇವಲ ಹಳದಿ ಬಣ್ಣಗಳಲ್ಲಿರುತ್ತವೆ.

ಶಾಲಾ ಬಸ್ ಯಾವುದೇ ನಗರಕ್ಕೆ ಸೇರಿದ್ದರೂ ಅದರ ಬಣ್ಣ ಯಾವಾಗಲೂ ಹಳದಿ ಬಣ್ಣದ್ದಾಗಿರುವುದನ್ನು ನೀವು ಗಮನಿಸಿರಬೇಕು. ಶಾಲಾ ಬಸ್‌ಗಳ ಬಣ್ಣವೇಕೆ ಹಳದಿ ಎಂದು ಯೋಚಿಸಿದ್ದೀರಾ? ಇದರ ಹಿಂದೆ ಪ್ರಮುಖ ಕಾರಣವೇ ಇದೆ.

ಶಾಲಾ ಬಸ್‌ಗಳಿಗೆ ಹಳದಿ ಬಣ್ಣ ಬಳಿಯುವುದರ ಹಿಂದೆ ವೈಜ್ಞಾನಿಕ ಕಾರಣ ಅಡಗಿದೆ. ಪ್ರತಿಯೊಂದು ಬಣ್ಣಕ್ಕೂ ನಿರ್ದಿಷ್ಟ ತರಂಗಾಂತರ ಮತ್ತು ಆವರ್ತನವಿದೆ. ಇತರ ಗಾಢ ಬಣ್ಣಗಳಿಗೆ ಹೋಲಿಸಿದರೆ ಕೆಂಪು ಬಣ್ಣದ ತರಂಗಾಂತರವು ಅತ್ಯಧಿಕವಾಗಿದೆ. ಇದೇ ಕಾರಣಕ್ಕೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ಟಾಪ್ ಲೈಟ್ ಆಗಿ ಬಳಕೆಯಾಗುತ್ತದೆ. ಶಾಲಾ ಬಸ್‌ನ ಹಳದಿ ಬಣ್ಣಕ್ಕೂ ಇದೇ ಕಾರಣ.

ಮುಖ್ಯ ಕಾರಣ ಹಳದಿ ಬಣ್ಣದ ತರಂಗಾಂತರ

ನೇರಳೆ, ಇಂಡಿಗೊ, ಹಸಿರು, ನೀಲಿ, ಹಳದಿ, ಕಿತ್ತಳೆ ಮತ್ತು ಕೆಂಪು ಈ ಏಳು ಬಣ್ಣಗಳನ್ನು ಬೆರೆಸಿ ಎಲ್ಲಾ ಬಣ್ಣಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣಗಳನ್ನು ಮಳೆಬಿಲ್ಲಿನಲ್ಲಿ ನೋಡಬಹುದು. ಇದನ್ನು VIBGYOR ಎಂದೂ ಕರೆಯುತ್ತಾರೆ. ಹಳದಿ ಬಣ್ಣದ ತರಂಗಾಂತರವು ಕೆಂಪು ಬಣ್ಣಕ್ಕಿಂತ ಕಡಿಮೆ ಮತ್ತು ನೀಲಿ ಬಣ್ಣಕ್ಕಿಂತ ಹೆಚ್ಚು. ಅದಕ್ಕಾಗಿಯೇ ಶಾಲಾ ಬಸ್‌ಗೆ ಕೆಂಪು ಬಣ್ಣದ ಬದಲು ಹಳದಿ ಬಣ್ಣ ಬಳಿಯಲಾಗಿದೆ.

ಅಪಾಯವನ್ನು ಸೂಚಿಸಲು ಕೆಂಪು ಬಣ್ಣವನ್ನು ಬಳಸುವುದರಿಂದ ಶಾಲಾ ಬಸ್‌ಗಳಿಗೆ ಹಳದಿ ಬಣ್ಣವನ್ನು ಮಾತ್ರ ಬಳಸಬಹುದಾಗಿದೆ. ಹಳದಿ ಬಣ್ಣದ ಮತ್ತೊಂದು ವೈಶಿಷ್ಟ್ಯವೆಂದರೆ ಮಂಜು, ಮಳೆ ಮತ್ತು ಇಬ್ಬನಿಯಲ್ಲಿಯೂ ಸಹ ಇದನ್ನು ಕಾಣಬಹುದು. ಇದಲ್ಲದೆ ಹಳದಿ ಬಣ್ಣದ ಪಾರ್ಶ್ವದ ಬಾಹ್ಯ ದೃಷ್ಟಿ ಕೆಂಪು ಬಣ್ಣಕ್ಕಿಂತ 1.24 ಪಟ್ಟು ಹೆಚ್ಚು. ಅದಕ್ಕಾಗಿಯೇ ಶಾಲಾ ಬಸ್‌ಗಳಿಗೆ ಬಳಿಯಲು ಹಳದಿ ಬಣ್ಣವನ್ನು ಬಳಸಲಾಗುತ್ತದೆ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರ ಪ್ರಕಾರ ಎಲ್ಲಾ ಶಾಲೆಗಳು ಸ್ಕೂಲ್‌ ಬಸ್‌ಗಳಿಗೆ ಹಳದಿ ಬಣ್ಣ ಬಳಿಯುವುದು ಕಡ್ಡಾಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...