ವಾಹನ ಖರೀದಿಸಿದ ಬಳಿಕ ಅದರ ಮಾಲೀಕರು ಫ್ಯಾನ್ಸಿ ನಂಬರ್ ಪಡೆಯಲು ಬಯಸುತ್ತಾರೆ. ಹೀಗಾಗಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಇಲಾಖೆಗೆ ಆದಾಯ ತರಲು ಸಾರಿಗೆ ಇಲಾಖೆ ಮುಂದಾಗುತ್ತದೆ.
ಇದೇ ರೀತಿಯ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ಫ್ಯಾನ್ಸಿ ನಂಬರ್ ಪಡೆಯಲು ಖರ್ಚು ಮಾಡಿರುವ ಮೊತ್ತ ಹುಬ್ಬೇರಿಸುವಂತಿದ್ದು, ಆ ವ್ಯಕ್ತಿ ಈಗ ದೇಶದಾದ್ಯಂತ ಸುದ್ದಿಯಾಗಿದ್ದಾರೆ.
ಜಾಹೀರಾತು ಕ್ಷೇತ್ರದ ನೌಕರರಾಗಿರುವ ಚಂಡಿಗಢ ಮೂಲದ 42 ವರ್ಷದ ಬ್ರಿಜ್ ಮೋಹನ್, 71 ಸಾವಿರ ರೂಪಾಯಿಗಳಿಗೆ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಿದ್ದಾರೆ. ಇದಕ್ಕೆ CH-1, CJ 0001 ನೋಂದಣಿ ಸಂಖ್ಯೆ ಪಡೆಯಲು ಅವರು ಬರೋಬ್ಬರಿ 15.44 ಲಕ್ಷ ರೂಪಾಯಿಗಳನ್ನು ತೆತ್ತಿದ್ದಾರೆ.