ಅಡುಗೆ ಮಾಡುವುದಕ್ಕೆ ಬೇಜಾರು ಅನಿಸ್ತಿದೆಯಾ…? ಹಾಗಾದ್ರೆ ತಡವೇಕೆ ಮೊಸರು, ಸೌತೆಕಾಯಿ, ಕ್ಯಾರೆಟ್ ಇದ್ದರೆ ಥಟ್ಟಂತ ಮಾಡಿ ಈ ಕ್ಯಾರೆಟ್, ಸೌತೆಕಾಯಿ ಸೇರಿಸಿ ಮೊಸರನ್ನ. ಇದು ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
1 ಕಪ್-ಕತ್ತರಿಸಿಟ್ಟುಕೊಂಡ ಸೌತೆಕಾಯಿ, 1 ಕಪ್-ಕ್ಯಾರೆಟ್ ತುರಿ, ½ ಕಪ್- ಮೊಸರು, ¾ ಕಪ್- ಅನ್ನ, ¼ ಕಪ್- ಕೊತ್ತಂಬರಿ ಸೊಪ್ಪು, 1/4ಟೀ ಸ್ಪೂನ್-ಹಸಿಮೆಣಸಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು., ಒಗ್ಗರಣೆಗೆ-1 ಟೀ ಸ್ಪೂನ್ ಎಣ್ಣೆ, 1 ಟೀ ಸ್ಪೂನ್-ಜೀರಿಗೆ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, ¼ ಟೀ ಸ್ಪೂನ್-ಇಂಗು, 6-ಕರಿಬೇವಿನ ಎಸಳು.
ಮಾಡುವ ವಿಧಾನ:
ಒಂದು ಬೌಲ್ ಗೆ ಅನ್ನ ಹಾಕಿ ಅದಕ್ಕೆ ಕ್ಯಾರೆಟ್ ತುರಿ, ಸೌತೆ ಕಾಯಿ, ಉಪ್ಪು, ಮೊಸರು, ಹಸಿಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಜೀರಿಗೆ, ಇಂಗು, ಉದ್ದಿನಬೇಳೆ, ಕರಿಬೇವಿನ ಎಸಳು ಹಾಕಿ ಅದನ್ನು ಈ ಮೊಸರನ್ನಕ್ಕೆ ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ.